ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-“ಮಾತಿಗೆ ಸಿಕ್ಕಾಗ …”

meenakshi

ದೂರದೂರಿನವನು
ಮನದಿ ಮನೆ ಮಾಡಿದವನು
ಮಾತಿಗೆ ಮಾತು
ಅದು ಇದು ಮತ್ತೊಂದನ್ನಾಡುವುದು
ಕಥೆ ಕವನ ಸಾಹಿತ್ಯ
ಹಾಸ್ಯ ಹರಟೆ
ಕಾವ್ಯಕ್ಕೆ ಸ್ಪೂರ್ತಿ
ಕಾವ್ಯಕನ್ನಿಕೆ
ಬೆಳದಿಂಗಳ ಚೆಲುವೆ
ಹಾಡಾಗಿ ಕಾಡಿದ್ದು
ಮೀನ ಕಂಗಳಲ್ಲಿ
ನೂರು ಕನಸು ತೊಟ್ಟವಳು
ನವಿಲಿನ ಚಿತ್ತಾರವ
ಮೈಯಲ್ಲ ಮೂಡಿಸಿಕೊಂಡವಳು
ಸಾಗರದ ಮುತ್ತಿನ
ತೊಡುಗೆ ಇಟ್ಟವಳು
ಆಡಾಡಿ ಬರುವ ತೆರೆಗಳ
ಉಡುಗೆ ತೊಟ್ಟವಳು
ಮುಡಿಯಲಿ ಜಲರಾಶಿಯ
ಮುಂಗುರುಳ ಮುಡಿದವಳು
ಮಾಗಿಯ ಚಳಿಯ
ಮರೆಮಾಚಿ ನಿಂತವಳು
ತಣ್ಣನೆಯ ಉಸಿರಿಗೆ
ಬಿಸಿ ಉಸಿರ ಬೆರಸಿದವಳು
ಎಳೆ ನೇಸರಿನ ಹೊಂಬಿಸಿಲಲಿ
ಹೊಂಬಣ್ಣದಿ
ಮಿಂಚಿ ಮಾಯವಾದವಳು
ಮಾತು ಕತೆ
ಹೀಗೆ ಮಾತಿಗೆ ಸಿಕ್ಕಾಗ…..


Leave a Reply

Back To Top