ಕಾವ್ಯ ಸಂಗಾತಿ
ಸವಿತಾ ದೇಶಮುಖ
ಮಾತು ಮೌನ
ಮಾತಿಗೆ ಮೌನ ಬೇಕಾಯಿತು
ಜಗದ ರೀತಿ ನೀತಿ ನೋಡಿಯಿತು
ಮನುಷ್ಯರ ನಡೆ ನುಡಿಯಿತು
ಸಂಬಂಧದಿ ತಿರದ ಸ್ವಾರ್ಥ ಕಂಡಿತು
ವೇಷ ಬದಲಿಸುವ ಆಟದ ಕೂಟ…!!೧!!
ನಂಬಿಕೆ ಅಪನಂಬಿಕೆ ಆಯಿತು
ಮಾತಿಗೆ ಮಾತುಕತೆ ಬೆಳೆಯಿತು
ಇನ್ನೊಂದು ಮತ್ತೊಂದುಆಯಿತು
ಸತ್ಯ ಹೋಗಿ ಮಿಥ್ಯವಾಯಿತು
ಮಿಥ್ಯ – ಸತ್ಯ ಬೆಸೆದ ಮಾಟ….!!೨!!
ಕಥೆಗೆ ಇನ್ನೊಂದು ಕಥೆಯಾಗಿ
ಬಾಯಿಂದ ಬಾಯಿಗೆ ಮತ್ತೊಂದಾಗಿ
ನಿಗಲಾರದ ನುಂಗಲಾರದ ತುತ್ತಾಗಿ
ನುಂಗದೆ ಉಗಳದೇ ಬಿಸಿ ತುಪ್ಪಾಗಿ
ಹಿಡಿದು ಬಿಡಿಸಿಕೊಳ್ಳದ ಸಹಿಸದ ಕಾಟ..!!೩!!.
ಯಾರನ್ನು ನಂಬೋದು ಯಾರನ್ನು
ಬಿಡುವುದು, ಸಹಿಸುವುದು ಯಾರನ್ನು
ಎಷ್ಟು ಮಾತನಾಡುವುದು, ಯಾರನ್ನು
ಗ್ರಹಿಸುವುದು, ಅನುಸರಿಸುವದು ಯಾರನ್ನು,
ಮಾತಿನ ಹಿಡಿತ ಮಾತಿನ ಕಡಿತದ ಓಟ..!!೪!!
ಮಾತಿಗೂ ವಿರಾಮ ಬೇಕಿದೆ
ಅದಕ್ಕೂ ವಿಶ್ರಾಂತಿ ಬೇಕಾಗಿದೆ
ಮಾತಿನ ಸತ್ಯತೆಗೆ ಇಳಿಯಬೇಕಿದೆ
ಒಂದು ಹೆಚ್ಚು- ಕಡಿಮೆಯಾದ ಶಬುದ
ಯುದ್ಧ ಕದನಕ್ಕೆ ಜಾರಲಿದೆ ಅರಿತ- ಮಾತು*,
ಮಾತು ಮೌನವಾಗಬೇಕಿದೆ….!!
ಸವಿತಾ ದೇಶಮುಖ
Superb madum
ಸುಂದರ ಭಾವ ಮ್ಯಾಡಂ