ಕಾವ್ಯ ಸಂಗಾತಿ
ಭವ್ಯ ಸುಧಾಕರ ಜಗಮನೆ
ಹಾಯ್ಕುಗಳು
ಜೀವನವದು
ನೋವು ನಲಿವ ಯಾನ
ಸಾಗಲೇಬೇಕು
ನಾವು ಯಾರನ್ನು
ಎಂದಿಗೂ ದ್ವೇಷಿಸದೆ
ಪ್ರೀತಿ ಹಂಚೋಣ
ನನ್ನ ತವರು
ನಿತ್ಯ ಹಚ್ಚ ಹಸಿರು
ನೆಮ್ಮದಿ ನೆಲೆ
ನಾನು ಬಾಳಲಿ
ಬೆವರು ಸುರಿಸುತ್ತಾ
ಸದಾ ದುಡಿವೆ
ಸದಾ ಸತ್ಕಾರ್ಯ
ಗೈವ ಹೃದಯದಲಿ
ದೈವ ಇರುತ್ತಾನೆ
ಭವ್ಯ ಸುಧಾಕರ ಜಗಮನೆ