ಕಾವ್ಯ ಸಂಗಾತಿ
ಸುಧಾ ಪಾಟೀಲ
ಮಾತು ಬಂತು
ತಾಯಿ ಮಮತೆ
ಕರುಳ ಬಳ್ಳಿ
ಕುಡಿಯ ಕಂದ
ಎಡವಿ ಬಿದ್ದೆ
ತೊದಲು ನುಡಿ
ಚುಕ್ಕೆ ಎಣಿಸುತ
ಬೆಳೆದ ಪುಟ್ಟ
ಮಗುವು ನಾನು
ಅಜ್ಜ ಅಜ್ಜಿಯ
ಕಡಲ ಪ್ರೀತಿ
ಅಪ್ಪ ಅಮ್ಮನ
ಕರುಣೆ ರೀತಿ
ಭಾವ ಪಕ್ಷಿಗೆ
ಮಾತು ಬಂತು
ಮೌನ ಹಾಡಿತು
ಕೋಗಿಲೆ
ಸುತ್ತ ಜನರ
ಟೀಕೆ ಟಿಪ್ಪಣಿ
ಹೊಗಳು ಶಬ್ದವು
ಮಲ್ಲಿಗೆ
ಬೆರಳ ಹಿಡಿದು
ಮರಳ ಮೇಲೆ
ಮೊದಲ ಹೆಜ್ಜೆ
ಅಕ್ಕ ಅಣ್ಣ ಅವ್ವ ಅಪ್ಪ
ನೆರೆದು ನೀಡಲು
ಹಿರಿಯ ಗರಿಮೆ
ಮೊದಲ ಯತ್ನಕೆ
ಸಿರಿಯ ಸಂಭ್ರಮ
ಇರಲಿ ನಿಮ್ಮ
ಒಡಲ ಪ್ರೇಮ
ಗಟ್ಟಿಗೊಳ್ಳಲಿ
ಕಾವ್ಯವು
ಹರಸಿ ಬೆಳೆಸಿದ
ತಂಪು ತವರಿನ
ಪೂಜ್ಯ ಆತ್ಮವೇ
ಇದೋ ನಿಮಗೆ
ಶರಣಾರ್ಥಿ
ಸುಧಾ ಪಾಟೀಲ
Excellent poem
Superb madam
ಸುಂದರ ಕವಿತೆ ಮೇಡಂ ಧನ್ಯವಾದಗಳು