ಕಾವ್ಯ ಸಂಗಾತಿ
ಭವ್ಯ ಸುಧಾಕರ ಜಗಮನೆ
ಕವಿತೆ
ನಾ ಬರೆವೆ ಕವಿತೆ
ಕವಿ ಎಂಬ ಪಟ್ಟಕ್ಕಾಗಿ ಅಲ್ಲ
ಕೀರ್ತಿಯ ಕಾಟ ನನಗಿಲ್ಲ
ಸನ್ಮಾನ ಬಹುಮಾನಗಳ ಹುಚ್ಚಿಲ್ಲ
ಮತ್ತೆಕೆ ..!…ಹೇಳು.?..
ಹೇಳುವೆ ಕೇಳಿರಿ….
ಚರಾಚರಗಳೊಂದಿಗೆಆತ್ಮೀಯತೆ ಬೆಸೆಯಲು
ನನ್ನ ಮನೋವೇದನೆ ಸಂವೇದನೆಗಳ ಅಭಿವ್ಯಕ್ತಿಗೆ
ಅಂತಾರಾಳದ ನಿರಾಳಕ್ಕಾಗಿ
ಮನಸ್ಸಿನ ಮುದಕ್ಕಾಗಿ
ರಸಾನುಭ ಪರಮಾನಂದಕ್ಕಾಗಿ
ಸಮಾಜದ ಹಿತಕ್ಕಾಗಿ
ಅಷ್ಟು ಸಾಕು ಇನ್ನೇನು ಬೇಕಿಲ್ಲ
ನನ್ನ ಕಾವ್ಯ ಕನ್ನಿಕೆಗೆ
ಭವ್ಯ ಸುಧಾಕರ ಜಗಮನೆ