ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ಸುಖದ ಹಂಬಲ
ಯುವಕ ನಾನು ಹೊಳೆ ಹೊಳೆವ ಬಾನ ಕಂಡು ನಗುವನ್ನು ಬೀರಿದ್ದೆ ಅಂದು
ಕಂಡಂತ ಕನಸು ನನಸಾಗುವಾಗ
ಮಾದಕವು ಸುಟ್ಟಿತ್ತು ಇಂದು
ಎಂತಹ ದೌರ್ಭಾಗ್ಯ ದುರ್ದೈವಿಯಾದೆನು
ಮಾದಕ ವ್ಯಸನದ ಸೆಳೆತದಲ್ಲಿ
ಒಮ್ಮೆ ಸೇವಿಸಿದರೆ ಮತ್ತೆ ಬೇಕೆನ್ನುವುದು
ಚಟವು ಹಠವು ವ್ಯಸನವು
ಗಾಂಜಾ ಆಫೀಮ್ ಎಂ ಡಿ ಎಂ, ಎಲ್ ಎಸ್ ಡಿ
ಕೋಕೇನ್ ಹೆರೋಯಿನ್ ಮಾರ್ಪಿನ್ ಕೊಡೀನ್
ಬೆಳಕಿನ ಬದುಕನ್ನು ಕತ್ತಲೆಗೆ ದೂಡಿ
ಮನುಜನ ಕೊಲ್ಲುವ ಮಾದಕ ವಸ್ತು ಇದುವೇ ನೋಡಿ
ಸುಖದ ಹಂಬಲ ಮಾದಕವಲ್ಲ
ಹೆತ್ತವರ ಕಣ್ಣೀರು ಸಾಗರವು
ಬಿಡಬೇಕು ತಮ್ಮ ಮಾದಕ ಸೇವನೆ
ಬದುಕಿನ ಹಾದಿಯು ಸುಗಮವು
ಮನ್ಸೂರ್ ಮೂಲ್ಕಿ