ಕಾವ್ತ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ಅಕ್ಷರದವ್ವ
ಅಕ್ಷರದವ್ವ ನೀನಾದೆ ಮಾತೆ ಸಾವಿತ್ರಿ
ನಿನ್ನೊಡಗೂಡಿದರು ಪತಿ ಜ್ಯೋತಿ
ನೀವಾಗಿರಲಿಲ್ಲ ಜಗಕೆ ಬರೀ ಸತಿ ಪತಿ
ನಿಮ್ಮಿಬ್ಬರಿಂದ ಮೊಳಗಿತು ಅಕ್ಷರದ ಕ್ರಾಂತಿ
ನಭದಗಲಕೆ ಹರಡಿತು ಹೆಂಗಳೆಯರ ಕೀರ್ತಿ
ವಿವಾಹವಾದಾಗ ವಯಸ್ಸಿನ್ನೂ ಎಂಟು
ಕಂಗಳಲಿ ಚಿಗುರೊಡೆದ ಕನಸು ನೂರೆಂಟು
ಸ್ತ್ರೀ ಉದ್ದಾರಕ್ಕೆ ದುಡಿವ
ಛಲವುಂಟು
ಎಲ್ಲದಕ್ಕೂ ದಾರಿದೀಪ ಪತಿಯ ನಂಟು
ಹಾದಿಯುದ್ಧಕೂ ಬಿಡಿಸಿ ನಡೆದಿರಿ ಎಲ್ಲಾ ಕಗ್ಗಂಟು
ಸಗಣಿ ಕೆಸರು ಕಲ್ಲಿಗೆ ಹೆದರದೆ
ಯಾವ ಹೊಗಳಿಕೆ ಹೆಸರ ಬಯಸದೆ
ಫಾತಿಮಾ ಸಾವಿತ್ರಿಯರ ಸ್ನೇಹವಾಯಿತು ಬಲೆ
ಕಟ್ಟಿದಿರಿ ಬಾಲಕಿಯರಿಗೆ ಶಾಲೆ
ನಿಮ್ಮಿಂದ ಸ್ತ್ರೀಯರಿಗೆ ಒಂದು ನೆಲೆ
ಅಸಮಾನತೆ ಸುಧಾರಣೆಯ ಸೆಲೆ
ಅಬ್ಬಬ್ಬಾ ಸರಿಸಿದಿರೆಷ್ಟೋ ಸಂಕೋಲೆ
ಸಾವಿತ್ರಿ ಜ್ಯೋತಿ ಬಾಪುಲೆ ನಿಮಗಿದೋ ಪದ ಪುಷ್ಪದ ಮಾಲೆ
ಶೋಭಾ ಮಲ್ಲಿಕಾರ್ಜುನ್