ಕಾವ್ಯ ಸಂಗಾತಿ
ಕೆ.ಬಿ.ವೀರಲಿಂಗನಗೌಡ್ರ
ಲೇ!
ನಿನಗೆ
ಅಭಿಮಾನಿಗಳು ಬೇಕಿತ್ತು
ಸ್ವಾಭಿಮಾನಿಗಳು ಬೇಡವಾಗಿತ್ತು
ನಿನಗೆ
ಬೆಂಡಾಗುವವರು ಬೇಕಿತ್ತು
ಬಂಡಾಯಗಾರರು ಬೇಡವಾಗಿತ್ತು
ನಿನಗೆ
ಹಿಂಬಾಗಿಲೇ ಬೇಕಿತ್ತು
ಮುಂಬಾಗಿಲು ಬೇಡವಾಗಿತ್ತು
ನಿನಗೆ
ನಿನ್ನಂತಹವರೇ ಬೇಕಿತ್ತು
ನನ್ನಂತಹವರು ಬೇಡವಾಗಿತ್ತು
ಲೇ..
ವಿರೋಧಿಯೆಂದು
ನನ್ನನ್ನು ಹೊರಗುಳಿಸಿದೆ
ಕವಿತೆಯಾಗಿ ನಿನ್ನನ್ನೊಳಗಿಳಿಸಿಕೊಂಡೆ.
–ಕೆ.ಬಿ.ವೀರಲಿಂಗನಗೌಡ್ರ.