ನಿನ್ನಾಕೆ ನಿರಾಭರಣ ಸುಂದರಿ. ಮುದ್ದು ರಾಜಕುಮಾರಿ. ಆಕೆಯ ಮುದ್ದುಮುಖ ಪದೇ ಪದೇ ನೋಡುವಂತಿದೆ. ಕಣ್ಣೋಟ ಕಾಡುವಂತಿದೆ. ಬಳಕುವ ಮೈಮಾಟ ಸಮ್ಮೋಹನಗೊಳಿಸುವಂತಿದೆ. ನವಿರಾಗಿ ಆವರಿಸುವ ಮೈ ಸುಗಂಧ ಎಂಥವರನ್ನೂ ಸೆಳೆಯುವಂತಿದೆ. ಮಂದಸ್ಮಿತೆ, ಆಪ್ತತೆ ಮುಗ್ಧತೆ ಸರಳತೆ ಸಜ್ಜನಿಕೆ ಲಜ್ಜೆಗಳೇ ಆಕೆಯ ಆಭರಣಗಳು ಇಲ್ಲಸಲ್ಲದ ಮಾತುಗಳನ್ನು ತಪ್ಪಿಯೂ ಆಡದವಳು. ಬಹು ಶಿಸ್ತಿನ ಭಾಷೆಯವಳು ಬ್ಯೂಟಿಫುಲ್, ಕ್ವೀನ್. ಮೋನಾಲಿಸಾ, ಸಿಂಡ್ರೆಲಾ ಎಂದೆಲ್ಲ ನಿನ್ನ ಕೊಂಡಾಡುವರು ನನ್ನ ಗೆಳೆಯರು.  

ನಿನ್ನ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ ಅನಿಸುತ್ತದೆ. ಸರಳತೆಯೇ ಮೈವೆತ್ತ ಮೂರ್ತಿಯ ಮುಂದೆ ಕೂತ ನನಗೆ ಬದುಕನ್ನು ಇಡಿಯಾಗಿ ಪ್ರೀತಿಸುವ ಬಗೆ ಮಾತನಾಡದೇ ಹೇಳಿಕೊಟ್ಟೆ. ತಮಾಷೆಯಲ್ಲೇ ಕಠಿಣ ಸಮಸ್ಯೆಗಳನ್ನು ನಿಭಾಯಿಸುವಷ್ಟು ಶಕ್ತಳು ನೀನು. ಎಲ್ಲವನ್ನೂ ಸುಧಾರಿಸುವಲ್ಲಿ ನಿಸ್ಸೀಮೆಯಾದವಳು. ಬದುಕಿನ ಒಳಸುಳಿಗಳ ಬಗೆಗಿನ ನಿನ್ನ ಮಾತುಗಳು ಜೀವನ ದರುಶನ ಹೊಳೆಯಿಸಲು ಯತ್ನಿಸುತ್ತವೆ. ನಿನ್ನ ಬುದ್ಧಿವಂತಿಕೆಯ ಪರಿ ಕಂಡು ಬೆರಗಾಗುವ ಪಾಳಿ ನನ್ನದು.

ಚಿಕ್ಕಂದಿನಿಂದಲೂ ನಾನು ನೀನು ಕೂಡಿಯೇ ಬೆಳೆದದ್ದು. ಕೂಡಿಯೇ ಕಲಿತಿದ್ದು. ಉನ್ನತ ಶಿಕ್ಷಣಕ್ಕೆಂದು ಊರುರು ಸುತ್ತಿ ಮರಳಿ ಊರಿಗೆ ಬಂದಿಳಿದಿದ್ದೆ. ನೀನು ದೂರ ಶಿಕ್ಷಣದಲ್ಲಿ ಮುಂದಿನ ಓದು ಮುಂದುವರೆಸಿದ್ದೆ. ಪರ ಊರಿನಲ್ಲಿದ್ದಾಗಲೂ ನಿನ್ನ ಪ್ರೀತಿಯ ಎಳೆಗಳೆಲ್ಲ ಜಗ್ಗಿದಂತಾಗುತ್ತಿದ್ದವು. ಕಣ್ಣಿಗೆ ನೇರವಾಗಿ ಕಾಣದ ಪ್ರೇಮದ ಎಳೆಗಳು ಹೃದಯದ ಮನೆಯಲ್ಲಿ ಮನೆ ಮಾಡಿದ್ದವು. ಬಾಲ್ಯದಲ್ಲಿ ಕಿಶೋರಾವಸ್ಥೆಯಲ್ಲಿ ಕೂಡಿ ಆಡಿದ ನೆನಪುಗಳು ಮಿಣುಕು ದೀಪಗಳಂತೆ ಆಗಾಗ ಮುಖ ತೋರಿ ಸಮಾಧಾನ ನೀಡುತ್ತಿದ್ದವು. ಕಾಲೇಜಿನ ದಿನಗಳಲ್ಲಿ ಪಡ್ಡೆ ಹುಡುಗರು ಕೆಲ ಪುಡಾರಿಗಳ ಜೊತೆಗೆ ನಾನು ಓಡಾಡುವುದನ್ನು ಕಂಡು ನನ್ನ ಬಗ್ಗೆ ಆಡಿದ ಮಾತುಗಳು ಅಪೂರ್ವ ಒಳನೋಟ ಹಾಗೂ ಅಗಾಧ ತಿಳಿವಳಿಕೆಯಿಂದ ಕೂಡಿವೆ ಎಂದೆನಿಸಿತು.

ಜೋಡಿಯ ಬಯಸುವ ವಯಸ್ಸಿನಲ್ಲಿ ನಿನ್ನದು ಪರಿಪಕ್ವಗೊಂಡ ವಯಸ್ಸಾಗಿತ್ತು.
ಇದನ್ನೆಲ್ಲ ನಮ್ಮೂರ ಕೆರೆಯ ದಂಡೆಯಲ್ಲಿ ಗಾಳಿಗೆ ಮುಖವೊಡ್ಡಿ ನೆನೆಯುತ್ತಿದ್ದೆ. ಹಬ್ಬ ಜಾತ್ರೆಯಲ್ಲಂತೂ ನೀಳ ಜಡೆಗೆ ಹೂಮಾಲೆ, ಲಂಗ ದಾವಣಿಗಳಲ್ಲಿ ಮಿಂಚುತ್ತಿದ್ದೆ ನೀನು. ಹುಡುಗರು ತೇರಿಗಿಂತ ತೆರೆದ ಕಣ್ಣುಗಳನ್ನು ಮುಚ್ಚದೇ ಹೆಚ್ಚೆಚ್ಚು ನಿನ್ನನ್ನೇ ನೋಡುತ್ತಿದ್ದರು. ಆ ಹುಡುಗರಲ್ಲಿ ನಾನೇ ಮುಂದಿರುತ್ತಿದ್ದೆ. ನಿಜ ಹೇಳಬೇಕೆಂದರೆ ಜಾತ್ರೆ ನೆಪ ಮಾತ್ರ ನಿನ್ನ ನೋಡುವುದೇ ಹಬ್ಬವೆಂದು ತಪ್ಪದೇ ಊರಿನ ಯಾವ ಜಾತ್ರೆಗಳನ್ನು ತಪ್ಪಿಸುತ್ತಿರಲಿಲ್ಲ.

ಮಾಯೆ ನೀನೊಂದು ಮಾಯೆ ಓ ನನ್ನ ಪ್ರೀತಿಯೆ. ಕೈಗೆ ಸಿಗದ ಛಾಯೆ ಎಂದು ಮನಸ್ಸು ಕೂಗಿ ಕೂಗಿ ಹೇಳುತ್ತಿತ್ತು. ಆದರೂ ಹೃದಯ ಮಾತ್ರ ನೀ ನನ್ನವಳು ನನಗೆ ಸಿಕ್ಕೇ ಸಿಗ್ತಿಯಾ ಅಂತ ಧೈರ್ಯ ತುಂಬುತ್ತಿತ್ತು. ಉದ್ಯೋಗ ಹುಡುಕುತ್ತಿದ್ದ ಸಮಯವದು. ನಿಮ್ಮ ಮನೆಯಲ್ಲಿ ವರಾನ್ವೇಷಣೆ ನಡೆಸಿದ್ದಾರೆಂಬ ಸುದ್ದಿ ಕಿವಿಗೆ ಬಿದ್ದು ಮನಸ್ಸಿಗೆ ಕಸಿವಿಸಿಯಾಯಿತು. ಬದುಕಿನ ವಾಸ್ತವತೆ ಬಗ್ಗೆ ನೀನು ಚೆನ್ನಾಗಿ ಬಲ್ಲೆ ಅಂತ ನನಗೆ ಚೆನ್ನಾಗಿ ಗೊತ್ತು. ಅದು ನಿನ್ನ ಗೆಳತಿ ಮಾಧುರಿಯ ಸ್ಥಿತಿಯನ್ನು ನೀನು ವಿವರಿಸಿ ಹೇಳಿದಾಗಲೇ ಗೊತ್ತಾಗಿತ್ತು.

ಬದುಕಿನ ನಾಗಾಲೋಟದಲ್ಲಿ ಮಕರಂದ ಹೀರಿದ ದುಂಬಿ ಕೈಗೆ ಸಿಗದೇ ಮತ್ತೆ ಮತ್ತೆ ನುಣುಚಿಕೊಳ್ಳುವ ಪತಿಯ ಕಂಡು ನಿಟ್ಟುಸಿರು ಚೆಲ್ಲುತ್ತಿದೆ ಮಾಧುರಿಯ ಜೀವ. ಹುಡುಗರ ಜೊತೆಗಿನ ಒಡನಾಟದ ಬಗ್ಗೆ ಉತ್ಸಾಹ ತೋರಿದ ಜೀವದ ಗೆಳತಿ ಮಾಧುರಿಗೆ ಪ್ರೀತಿ ಪ್ರೇಮ ಪ್ರಣಯ ಮದುವೆ ಎಲ್ಲದರ ಬಗ್ಗೆಯೂ ಗೊಂದಲಗಳು. ಮಾಧುರಿಯ ಪ್ರೇಮ ವಿವಾಹ ಮಗುಚಿ ಬಿದ್ದ ಹಿನ್ನೆಲೆಯಲ್ಲಿ ಕೆಲಸಕ್ಕೆ ಸೇರಿದ್ದಾಳೆ. ಅವಳ ಬಾಸ್ ಅನಿಲ  ‘ಯೂ ಶುಡ್ ಅಡ್ಜಸ್ಟ್ ವಿಥ್ ಸಿಸ್ಟಮ್’ ಎಂದು ಸುಸಂಸ್ಕೃತ ಭಾಷೆಯಲ್ಲಿ ಅವಳಿಗೆ ಮೈ ಹಂಚಿಕೊಳ್ಳಲು ಕರೆಯುತ್ತಾನಂತೆ.
 ಈ ನಡುವೆ ವಿಷವರ್ತುಲದಲ್ಲಿ ಬಿದ್ದು ಆಕೆ ಬದುಕನ್ನು ಹತೋಟಿಗೆ ತಗೆದುಕೊಳ್ಳಲು ಯೋಚಿಸಿ ವಿಫಲಳಾದಳು.

 ಒಳ್ಳೆಯವನೋ ಹಾಳಾದವನೋ ಗೊತ್ತಿಲ್ಲದೇ ಕೈ ಹಿಡಿದಳು. ಮೊಂಡುತನ, ತಮಾಷೆ ಚೈತನ್ಯವನ್ನು ವಿವಾಹ ಜೀವನದ ನಡಿಗೆಯಲ್ಲಿ ಕಳೆದುಕೊಂಡಳು. ಅಂಗೈ ಅರಗಿಣಿಯಂತಾದಳು. ಚಿಪ್ಪಿನಲ್ಲಿ ಅಡಗಿದಳು. ಅವಳ ಅಸಹಾಯಕತೆ ಬಾಂಧವ್ಯವನ್ನು ಕಡಿದುಕೊಳ್ಳಲಾಗದೆ ಪರಿತಪಿಸುವ ಒಂಟಿ ಹೆಣ್ಣಿನ ನೋವಿನ ಚಿತ್ರಣವನ್ನು ಪದಗಳಲ್ಲಿ ಹಿಡಿದಿಡುತ್ತ ನೀನಾಡಿದ ಮಾತು ಮನ ತಟ್ಟಿತು. ‘ಪುರುಷ ಮಹಿಳೆಯನ್ನು ದಮನಿಲು ಯತ್ನಿಸಿದಾಗಲೆಲ್ಲ ತನಗರಿವಿಲ್ಲದೇ ತಾನೂ ಬಲಿಯಾಗುತ್ತಿರುತ್ತಾನೆ. ಇದು ಸೃಷ್ಟಿಯ ಸಮನ್ವಯತೆ.’ ‘ನಾನೇ ಹೆಚ್ಚು. ನಾನು ಹೇಳಿದ್ದೇ ಅಂತಿಮ’ ಎನ್ನುವ ‘ಅತಿ’ಗಳೆ ವಿಜೃಂಭಿಸುತ್ತಿರುವ ಸಮಕಾಲೀನ ಸಮಾಜದ ಹದಗೆಟ್ಟಿರುವ ಕೌಟುಂಬಿಕ ಜೀವನದ ಬಗ್ಗೆ ನೀನಾಡಿದ ನುಡಿಗಳು ಬಹುಜನರಿಗೆ ಅನ್ವಯಿಸುವ ಮಾತುಗಳು.

ಎಂದಿನಂತೆ ನಾನು ನಮ್ಮ ತೋಟಕ್ಕೆ ಹೋಗಿದ್ದೆ. ಅಕಸ್ಮಾತ್ತಾಗಿ ನೀನು ನಿಮ್ಮ ತೋಟದಿಂದ ಮರಳುತ್ತಿದ್ದೆ. ಇದ್ದಕ್ಕಿದ್ದಂತೆ ಮಳೆ ಸುರಿಯತೊಡಗಿತು. ಮಳೆಯ ರಭಸಕ್ಕೆ ನೀನೇ ನಮ್ಮ ತೋಟದ ಕೋಣೆಯೊಳಗೆ ಕಾಲಿಟ್ಟೆ. ಭೋರೆಂದು ಸುರಿವ ಮಳೆಗೆ ಹೊರಗೆ ಕಾಲಿಡದೇ ಒಳಗೆ ಲಾಕ್ ಆದೆವು. ಚೆಂದದ ಪೋರಿ, ಚಿತ್ತ ಚೋರಿ, ಮದನಾರಿ ನೀನು. ನಿನ್ನಂದ ಹೊಗಳಲು ಪದಗಳೇ ಸಿಗುವುದಿಲ್ಲ. ನಯವಾದ ನಾಜೂಕು ಕೈಗಳು, ಎಳೆಯ ಗುಲಾಬಿಯ ಎಸಳಿನಂತಹ ತುಟಿಗಳು, ಬೀಸುವ ತಂಗಾಳಿಯಿಂದ ಕೆನ್ನೆಗೆ ಮತ್ತೆ ಮತ್ತೆ ಮುತ್ತಿಡುತ್ತಿದ್ದ ಮುಂಗುರುಳು, ಕೆನ್ನೆಗೆ ಅಡ್ಡ ಬರುತ್ತಿದ್ದ ಮುಂಗುರುಳನ್ನು ನನ್ನ ಬೆರಳಿಂದ ಕಿವಿಯ ಹಿಂದೆ ಸರಿಸಿದೆ.

ಕೈಯನ್ನು ಮೆತ್ತಗೆ ಹಿಡಿದೆಳೆದು ಒಮ್ಮೆ ಹಾಯಾಗಿ ಬಿಗಿದಪ್ಪಿ ಮುದ್ದಾಡಬೇಕೆನಿಸಿತು. ಬೀಸಿದ ಗಾಳಿಗೆ ನೀನುಟ್ಟ ಸೀರೆ ಸ್ವಲ್ಪವೇ ಸ್ವಲ್ಪ ಬದಿಗೆ ಸರಿಯಿತು. ನಿನ್ನ ನಯವಾದ ಸೊಂಟದ ತಿರುವು ಸೀರೆ ಅಂಚಿನಿಂದ ಕಾಣುತ್ತಿದ್ದ ಹೊಕ್ಕಳು ಕಾಣತೊಡಗಿದವು. ಆ ಕಡೆ ನೋಡಬಾರದು ಅಂತ ಅಂದುಕೊಂಡೆ. ಮೆಲ್ಲನೇ ಸೀರೆಯನ್ನು ಸರಿ ಮಾಡಿಬಿಡಬೇಕೆಂದು ಮುಂದಾದೆ. ಕೈ ನಡುಗಿತು. ಈ ನಡುವೆ ದೇಹ ಮನಸ್ಸು ನಿನ್ನೆಡೆ ಆಯಸ್ಕಾಂತದಂತೆ ಸೆಳೆಯುತ್ತಿತ್ತು.

ತ್ರಿಪುರ ಸುಂದರಿ  ಹೀಗೆ ಒಬ್ಬಂಟಿಯಾಗಿ ಸಿಕ್ಕಾಗ ರಸಿಕ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವೇ?  ರಸಿಕತೆಯನ್ನು ಮರೆಮಾಚಲು ಮುಂಗುರಳನ್ನು ನನ್ನ ಬೆರಳಲ್ಲಿ ಸಿಕ್ಕಿಸಿ ಆಟವಾಡುತ್ತ ನಿನ್ನನ್ನೆ ನೋಡತೊಡಗಿದೆ. ನನ್ನ ಕಂಗಳು ಸ್ವಲ್ಪ ಸ್ವಲ್ಪವೇ ಕೆಳಗಿಳಿದು ಏನನ್ನೋ ಹುಡುಕಿದವು. ತೆಳುವಾದ ಕಡುಗೆಂಪು ಸೀರೆಯ ಮರೆಯಲಿದ್ದ ದೃಶ್ಯ ಹಬ್ಬವೇ ಆಗಿತ್ತು  

ಭಾವನೆಗಳನ್ನು ತಡೆಯಲಾರದೇ ಎದ್ದು ನಿಂತು ಹೊರಟೆ. ಆದರೆ ಬಿಟ್ಟು ಹೋಗಲು ಮನಸ್ಸಾಗಲಿಲ್ಲ ಕೋಣೆಯ ಮಂದ ಹೊಂಬಣ್ಣದ ಬೆಳಕಿನಲ್ಲಿ ಬಂಗಾರ ಬಣ್ಣದ ಬಂಗಾರಿಯ ಸೌಂದರ್ಯ ನೋಡುತ್ತ ಭುಜಕ್ಕೆ ಭುಜ ತಾಕಿಸಿ ಕುಳಿತೆ.
ಅದೇ ಸಮಯದಲ್ಲಿ ‘ನೀನಂದ್ರೆ ನನಗೆ ತುಂಬಾ ಇಷ್ಟ.’ ನಿನ್ನನ್ನು ನೋಡಿದ್ರೆ ನನ್ನನ್ನು ನಾನು ಕಂಟ್ರೋಲ್ ಮಾಡಿಕೊಳ್ಳಲು ಆಗ್ತಿಲ್ಲ ಅಂತ ಮೆಲುದನಿಯಲ್ಲಿ ಉಸುರಿದೆ. ನಿಯಂತ್ರಣ ಕಳೆದುಕೊಂಡಂತಿದ್ದ ನನ್ನ ಬೆರಳು ನಿನ್ನ ಕೊರಳ ಸುತ್ತ ಮೆಲ್ಲನೇ ಹರಿದಾಡಿದವು. ನನ್ನ ಆ ಸ್ಪರ್ಶ ನಿರೀಕ್ಷಿಸಿರದ ನೀನು ಮೆಲ್ಲಗೆ ಅದುರಿದೆ.

ಕಳ್ಳಗಣ್ಣಲ್ಲಿ ನಿನ್ನೆಡೆ ನೋಡಿದೆ. ಆ ಮುದ್ದಾದ ಎರಡು  ಶಿಖರಗಳ ಕಣಿವೆಗಳಲ್ಲಿ ಮುಖವಿಡಬೇಕೆಂಬ ಬಯಕೆ ಹೆಚ್ಚಾಯಿತು. ಆದರೆ  ಹಟ ಮಾಡುತ್ತಿದ್ದ ಮನಸ್ಸಿಗೆ ಅದಕ್ಕೆಲ್ಲ ಇದು ಸೂಕ್ತ ಸಮಯವಲ್ಲವೆಂದು ಹೇಳುತ್ತ ಎದ್ದು ನಿಂತೆ. ಹಣೆಗೆ ಮೆತ್ತಗೆ ಮುದ್ದಿಸಿದೆ. ಅದೊಂದು ರೋಚಕ ಅನುಭವ ನೀಡಿತು.

 ದಾಹವೇರಿದ ದುಂಬಿಯಾಗಿದ್ದರೂ ಮಧು ಹೀರದೇ ಹೊರ ಬಂದೆ.ನನ್ನ ಮನದ ಉತ್ಕಟ ಭಾವನೆಯನ್ನು ನೀ ತಿಳಿದೆ.  ನನ್ನ ಸುಂದರವಾಗಿ ಬಾಚಿದ್ದ ಸೋಂಪಾದ ತಲೆಗೂದಲಲ್ಲಿ ಕೈ ಹಾಕಿ ನಿನ್ನಾಸೆ ಈಡೇರಿಸೋಕೆ  ಕಾಲ ಕೂಡಿ ಬರುತ್ತೆ. ಅಲ್ಲಿಯವರೆಗೂ ಸಹನೆಯಿಂದ ಕಾಯುವ ಜಾಣ ತರುಣ ನೀನಾಗಬೇಕೆಂದೆ. ನಸುನಗುತ್ತ  ನನ್ನ ಕೈ ಹಿಡಿದು ಹೊರ ನಡೆದೆ. ಆಗ ಹೊರಗೆ ಮಳೆ ನಿಂತಿತ್ತು. ಮನದ ಒಳಗೆ ಮಾತ್ರ  ತುಂಟುತನದ ಆಸೆಯ ಹನಿಗಳು ತೊಟ್ಟಿಕ್ಕುತ್ತಿದ್ದಲೇ ಇದ್ದವು.

 “ಈ ಉಸಿರಿಗೆ ಗಾಳಿಯೇ ನೀನಾಗಿರು. ನಾ ನಡೆಯುವ ದಾರಿಯೇ ನೀನಾಗಿರು. ಬೇಕೀಗ ಬೇರೆ ಏನು ಈ ಜೀವಕೆ. ಈ ಪ್ರೀತಿಯನ್ನು ನೋಡಿ ಆ ಮೋಡ ಕರಗುತ ಮತ್ತೆ ಮಳೆಯಾಗಿದೆ.” ಎನ್ನುವ ಹಾಡು ನೆನಪಿಗೆ ಬಂತು. ಮನದಾಸೆಯಂತೆ ಮದುವೆಯೂ ಆಗಿದೆ. ಕಡಿದಿಟ್ಟ ದಂತ ಬೊಂಬೆಯತಿರುವ, ಬಳ್ಳಿಯಂತಹ ನಿನ್ನ ದೇಹವನ್ನು ಅಪ್ಪಿಕೊಂಡು ಉಕ್ಕೇರಿದ ಕಾಮಕ್ಕೆ ಪೂರ್ಣವಿರಾಮ ಹಾಕದೇ, ಸಿಹಿ ಮಿಲನದ  ಸ್ವರ್ಗ ಸುಖ ಸವಿಯುವಾ.
ಬಂದು ಉಪಕರಿಸು ಸವಿ.


One thought on “

Leave a Reply

Back To Top