ಕಾವ್ಯ ಸಂಗಾತಿ
ಸುವರ್ಣಕುಂಬಾರ
ಬೀಮಾ ತೀರದಲ್ಲಿ
ಭೀಮಾ ತೀರದಲ್ಲಿ ಮೂಳಗಿತು ರಣಕಹಳೆ
ಭಾರತಾಂಬೆಯ ಸ್ವಾತಂತ್ರ್ಯದ ಗಳಿಗೆ
ಬ್ರಿಟಿಷರ ಸದ್ದೆ ಬಡಿಯುವ ಓಕುಳಿ
ರಕ್ತರಕ್ತ ಮಾಡಿತು ರಕ್ತಭೀಜಾಸುರನಂತೆ ಧೂಳಿ
ಸಂಧಾನಕ್ಕೆ ಸಾಗಿದರು ಸಿದ್ದಾಂಕರು ಅಂದು
ಬಲಿಕೊಡುವಾ ಬ್ರಿಟಿಷ್ರರ ಮಾರಮ್ಮನಿಗೆಂದು
ಅಲ್ಲಗಳಿದರು ಪೇಶ್ವೆಯ ರಾಜ ಷಾಹಿಗಳಂದು
ಮಾತು ಮುಗಿಲುಮುಟ್ಟಿ ಯುದ್ದ ಬಾಗಿಲುತಟ್ಟಿ ಅಂದು
ಹೊತ್ತಿತು ಹೊತ್ತಿತು ತಾಳ್ಮೆಯ ಕಡಲಿನಲ್ಲಿ ಜ್ವಾಲಾಮುಖಿಯೂ
ಆತ್ಮಗೌರವ ಹಕ್ಕಿಗಾಗಿ ಹೋರಾಟವೇ ಗತಿಯೂ
ಸಹನಶಕ್ತಿ ಅಳಿದರಲ್ಲಿಂದಲೇ ಯುದ್ದವದು ಖಾತ್ರಿ
ಒಮ್ಮೆ ನಡುಗಿತು ಸಿಂಹಘರ್ಜನಗೆ ಧಾತ್ರಿ
ಶಿರೂರಿನಿಂದ ಇಪ್ಪತ್ತೆಳು ಮೈಲು ದೂರವು
ನಡೆದೆ ಬಂದರು ಭೀಮ್ ಕೊರೇಂಗಾವಿಗೆ ಸೈನಿಕರು
ಇಪ್ಪತ್ತೆಂಟು ಸಾವಿರಮಂದಿ ಪೇಶ್ವೇಯ ಯೋಧರು
ಹನ್ನೆರಡುಗಂಟೆ ಕಾದಾಡಿ ಇತಿಹಾಸ ಸೃಷ್ಟಿಸರು
ಪೇಶ್ವೆಗಳ ಉತ್ತಾರಾದಾಯಿತ್ವವೇ ಅಂತ್ಯಕ್ಕೆ ಕಾರಣವು
1818ರ ಜನವರಿ ೧ ಕ್ಕೆ ಮಹಾಸೈನ್ಯವಾ ಸೋಲಿಸಿದರು
ಗೆದ್ದು ವೀರಮರಣ ಹೊಂದಿದವರ ಹೆಸರು ಕೆತ್ತಿಸಿದ ಸ್ತಂಭವು
ಮಣ್ಣಿನ ಕಣ ಕಣವೂ ಸಾಕ್ಷಿ ಹೇಳುತ್ತಿದೆ ಈ ದಿನವು
ತಪ್ಪದೆ ಹೋದರು ಬಾಬಾ ಸಾಹೇಬರು
ವೀರರಿಗೆ ವಂದನೆಯ ಅರ್ಪಿಸಲು
ಸ್ಮಾರಕ ಮಹಾತ್ಮರ ಶೌರ್ಯದ ಕಥೆಯನ್ನು ಹೇಳುತ್ತಿದೆ ಇಂದಿಗೂ
ಮೆರೆದರು ಸ್ವಾತಂತ್ರ್ಯದ ಸಂಗ್ರಾಮದ ವರೆಗೂ
ಸುವರ್ಣ ಕುಂಬಾರ
ಚೆನ್ನಾಗಿ ಇದೆ ಮೇಡಂ