‘ಹೊಳಪು’ ಗಾಯತ್ರಿ ಎಸ್ ಕೆ ಅವರ ಕವಿತೆ

ಸದಾ ಹೊಳಪಿರುವುದು
ಈ ಪ್ರೇಮ ವಿಚಾರ
ತಲ್ಲಣದ ಸಮಯದಲ್ಲೂ
ನೆನಪಿಸುವುದು..

ಆಗಾಗ ಬರುವಂತೆ
ನೆನಪಿಸುವಂತೆ
ಪಿಸು ಮಾತುಗಳ ಸಂದೇಶ
ಪ್ರೀತಿ ಉಕ್ಕುವಂತೆ..

ನಿನಗೆ ನಾನು ನನಗೆ ನೀನು
ಬೇರಿಲ್ಲ ವಿಷಯ ಸದಾ
ಇರುವ ಸ್ನೇಹ ತಂತು
ನಮ್ರ ಪ್ರೀತಿ ವಿಶ್ವಾಸ..

ಮನದ ಮಾತುಗಳ ಒಲುಮೆ
ಸ್ನೇಹ ಸೇತುವೆಯ ಚಿಲುಮೆ
ಅರಳುವ ಒಲವು
ಬಣ್ಣಿಸುವ ನಿಲುವು..

ಕಾಯುವುದು ಅದಕೆ
ಒಲವೇ ಮಂದಾರ
ಪ್ರೀತಿಯ ಶೃಂಗಾರ
ಪದಗಳ ವರ್ಣೀಸುವಿಕೆ..!!

ಮನದ ಮಾತುಗಳ ನೆನಪು
ಪ್ರೀತಿಯ ಹೃದಯದ ಹೊಳಪು
ಸದಾ ಕಾಡುವ ಕನಸುಗಳ
ಬಿಂಬವು ಸವಿಮಾತಿನ ಚುಂಬನವು..!!


Leave a Reply

Back To Top