ಮನ್ಸೂರ್ ಮೂಲ್ಕಿಯವರಕವಿತೆ-ಹೃದಯ ಬಂಧನ

ಸೆರೆಯಾದೇ ನಾನು ಸೆರೆಯಾದ ನೀನು
ಸವಿಯಾದ ಮಾತು ಹಿತವಾಗಿದೆ
ನನ್ನ ಕನಸು ನಿನ್ನಲ್ಲಿ ನೆಲೆಯಾಗಿ
ನಿನ್ನ ನಗುವು ಬೆಳಕಿನ ದೀಪವಾಗಿದೆ

ನೂರೊಂದು ಸಂತೆ ಬದುಕಿನ ಕಂತೆ
ನನ್ನೊಳು ನೀನು ಆರದ ದೀಪದಂತೆ
ಇರು ನೀನು ನನ್ನಲ್ಲಿ ಸುಖವಾಗಿಯೇ
ಅಂಬಾರಿಯಲ್ಲೂ ಕರೆದೊಯ್ಯುವೆ

ನಮ್ಮ ಪ್ರೀತಿಯು ಬಗೆಹರಿದಿದೆ
ಇನ್ನೆಂದೂ ಈ ಜೀವ ಒಂದೇನೆ
ಒಲಿದ ಪ್ರೀತಿಯು ಮರವಾಗಿದೆ
ಮರದಂತೆಯೇ ನಾ ನೆರಳಾಗುವೇ

ನಿನ್ನ ಮಡಿಲು ನನ್ನ ನೋಟ
ಅದುವೇ ಹೃದಯ ಬಂಧನ
ಆ ದೇವ ಕರೆಯೋವರೆಗೂ
ನಾನು ನೀನು ಇರುವ ಹೀಗೆನೇ


Leave a Reply

Back To Top