ಕಾವ್ಯ ಸಂಗಾತಿ
ಸವಿತಾ ದೇಶಮುಖ
ಕೀರ್ತಿ
ಕೀರ್ತಿ ಮಾಯೆಯ
ಬೆನ್ನಟ್ಟಿದ ಪಯಣ
ಕೀರ್ತಿಯ ಹರಣ
ಅಪಕರ್ತಿಯ ಉಗಮ …
ಕೀರ್ತಿಯು ಬೆನ್ನಟ್ಟಿ ಬರಲಾರಳು
ಅವಳಿಗಿದೆ ಗತ್ತು ಗಮ್ಮತ್ತು
ಯಾರ ಕೈಗೆ ಎಟುಕದ ತಾಕತ್ತು
ಇರುವಳು ಹೇಮ ಬಂಧನದಲ್ಲಿ
ಜೀವನ ಸಾಮರಸ್ಯ ಹೊಂದಿದವರಲ್ಲಿ ,
ನುಡಿ ನಡೆಯು ಒಂದಾದವರಲ್ಲಿ ,
ಹಾಲು ಜೇನಿನಂತೆ ಬದುಕಿದವರಲ್ಲಿ ,
ನಿಷ್ಠೆ- ಪ್ರಾಮಾಣಿ-ನಿಸ್ವಾರ್ತೆಗಳಲ್ಲಿ ..
ನಿನ್ನ ವಾಸವು…
ಆದರೂ…..,
ಕೀರ್ತಿ ನೀನು ಬಲು ಜಾಣೆ ..,
ಸುಳ್ಳು- ಗೊಳ್ಳು ಹೇಳುವವರಲ್ಲಿ
ತಮ್ಮನ್ನು ತಾವು ಬಣ್ಣಿಪೆರಲ್ಲಿ
ಆತ್ಮ ಗೌರವ ಕಳಕೊಂಡವರಲ್ಲಿ
ನಿನ್ನಲ್ಲಿ ಶರಣಾದವರಲ್ಲಿಯೂ
ನಿನ್ನ ವಾಸವು
ಈ ಇರುವಿಕೆಯು ಕ್ಷಣಿಕವೇ…….?
ಈ ಪ್ರಶ್ನೆಗೆ ಉತ್ತರವುಂಟೆ ನಿನ್ನಲ್ಲಿ….
ಸವಿತಾ ದೇಶಮುಖ