ಕಾವ್ಯ ಸಂಗಾತಿ
ಹೆಚ್. ಎಸ್. ಪ್ರತಿಮಾ ಹಾಸನ್
ಮಳೆಗಾಲದ ಎರಡು ಕವಿತೆಗಳು
ಕವಿತೆ ಒಂದು
ಕಣ್ಣಂಚ ಕಣ್ಣೀರ ಒರೆಸಲು ಬಾ ಒಮ್ಮೆ
ಕೈ ಮುಗಿದು ಕೇಳುವೆನು ದೇವನೇ
ಜಗದಲಿಹ ಜನರ ಕಷ್ಟಗಳ ಕೇಳೊಮ್ಮೆ
ಅತಿಯಾದ ಮಳೆಯೂ ತಂದಿಹುದು ಆತಂಕ….
ಹಲವೆಡೆ ಮಳೆಯ ಅಬ್ಬರವು ನೋಡು
ಸಾವು-ನೋವುಗಳ ಸರಣಿ ಕೇಳಲಾಗುತ್ತಿಲ್ಲ
ಎಲ್ಲೆಡೆಯು ಭಯದ ಆತಂಕ ಇದೆಯಲ್ಲ
ಅತಿಯಾದ ಅಮೃತ ವಿಷವು ಕೇಳು ದೇವ….
ಭಕ್ತಿಯಲಿ ಬೇಡುವೆವು ಎಲ್ಲರೂ ನಿನ್ನನ್ನು
ಪ್ರಕೃತಿಯ ವಿಕೋಪ ತಡೆಯಲಾಗುವುದಿಲ್ಲ ಇನ್ನು
ಮಳೆರಾಯ ಸರಿಸಮನೆ ಸುರಿಯದಿರು ನೀನು
ಎಲ್ಲರಿಗೂ ಜೀವದ ಭಯವಿಹುದು ಕೇಳು……..
ಸರಿ ಸಮವಾದ ವಾತಾವರಣ ನೀಡೆನುತ
ಪ್ರಕೃತಿಯ ಸಮತೋಲನವಾಗಬೇಕೆನುತ
ಕೈಮುಗಿದು ಬೇಡುವೆನು ಆರ್ಭಟ ನಿಲ್ಲಿಸೆನುತ
ಜಗದ ನಿಯಮವ ಪಾಲಿಸು ಮಾನವನೆನುತ……….
ಅರಿತು ಬಾಳಿದರೆ ಜೀವನವು ತಿಳಿಯಿರಿ
ಪ್ರಕೃತಿಗೆ ಬೆಲೆಯನು ನೀಡುತಲಿ ನಡೆಯುತಿರಿ
ಪರಿಸರ ಉಳಿವಿನ ಮುಂದೆ ನಾವು ಬಾಗಬೇಕು
ಗಿಡ ನೆಡುತ ಅದನು ಪೋಷಿಸಿ ಬೆಳೆಸಬೇಕು…..
*****
ಕವಿತೆ-ಎರಡು
ಎಲ್ಲೆಲ್ಲೂ ರೈತರ ಪರದಾಟ ನೋಡುತಲಿ
ಮಳೆರಾಯ ಆರ್ಭಟವ ನೀ ನಿಲ್ಲಿಸು ಎನ್ನುತಲಿ
ಎಲ್ಲಿ ನೋಡಿದರೆ ಅಲ್ಲಿ ಮಳೆಯ ನೀರುರಲು
ಎಲ್ಲೆಡೆಯು ತುಂಬಿದೆ ನೀರು ನೀರು ನೀರು ……….
ಪ್ರೀತಿಯ ಭಾವದಲಿ ಜೀವಿಸುತ ನಾವೆಲ್ಲರು
ಬೆಲೆ ಏರಿಕೆ ಹೆಚ್ಚಾಗಿದೆ ಎಲ್ಲೆಡೆಯು ಎನ್ನುವರು
ಜೊತೆಗೆ ವರುಣನು ಹೆಚ್ಚಿನ ಕೃಪೆ ತೋರುತಿರಲು
ಯೋಚಿಸಬೇಕಾಗಿದೆ ನಮ್ಮ ಜೀವನ ನೋಡುತಿರು ……
ಕೆಲಸಕೆ ಹೋಗಲು ಯೋಚಿಸಬೇಕಾಗಿದೆ
ಕೆಲವೆಡೆ ಮನೆ, ಶಾಲೆ ಬಿದ್ದು ಹೋಗಿದೆ
ಮಳೆ ಇಲ್ಲದೆ ಪರದಾಡುತ ಒಂದು ದಿನ ನಾವಿದ್ದೆವು
ಅತಿಯಾಗಿದೆ ಎಂದು ಯೋಚಿಸಬೇಕಾಗಿದೆ ಮನವು ……
ಜನಜೀವನ ನಡೆಸಬೇಕು ಸರಿಸಮದಲಿ
ವರುಣನು ದಯೆ ತೋರಬೇಕಿದೆ ಪ್ರೀತಿಯಲಿ
ಎಲ್ಲೆಡೆಯು ಮಕ್ಕಳಿಗೆ ರಜೆ ಘೋಷಿಸಲಾಗಿದೆ
ರಜೆಯ ದಿನಗಳಲಿ ಅದನು ಸರಿದೂಗಿಸಬೇಕಾಗಿದೆ……
ಹೊರಹೋದರೇನಾಗುವುದೆಂಬ ಭಯದಲಿ
ಹೋಗದಿದ್ದರೇ ಮನೆಯ ಕೆಲಸವಾಗುವುದಿಲ್ಲ
ಮುತ್ತೈದೆಯರ ಪೂಜೆಯು ಭಕ್ತಿಯಿಂದ ಅರ್ಪಣೆ
ಕೆರೆ ಕಟ್ಟೆಗಳಿಗೆ ಬಾಗಿಣದ ಸಮರ್ಪಣೆ……..
ಎಲ್ಲರಿಗೂ ಸಂತಸವನು ನೀಡು ದೇವ ಎನುತಲಿ
ಜೊತೆ ಜೊತೆಗೆ ಎಲ್ಲವು ಸರಿಸಮಾನವಾಗಿರಲಿ
ಅತಿಯಾಗಿ ಯಾವುದು ಸಹಿಸಲಾಗದು ನೋವಲಿ
ಪ್ರಕೃತಿಯ ವಿಕೋಪಕೆ ಆಗದಿರಲಿ ಸಾವು-ನೋವು ಎನ್ನುತಲಿ …..
ಹೆಚ್. ಎಸ್. ಪ್ರತಿಮಾ ಹಾಸನ್.
ಕವಿತೆ ಚೆನ್ನಾಗಿ ಬಂದಿದೆ ಮೇಡಂ
ಸವಿತಾ ದೇಶಮುಖ