ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ಸತ್ವ ಸುತ್ತ
ಒಳಗೊಂದು ಬಿಂದು
ಮನಸೊಳಗೆ ಭಾವದೊಳಗೆ
ಪರಿಧಿ ಹಾಕಿ ಉಳಿದು
ಗೆರೆ ಎಳೆದು ಬಿಡುವುದು
ಅಂತರಂಗ ಭರವಸೆ
ನೋವು ತಲ್ಲಣಗಳ
ಪರಿಚಯಿಸಿ ಜಗವ
ಸುತ್ತಿಸಿ ಮನಸೊಳು
ಇದ್ದು ಬಿಡುವುದು
ಮೂಲೆಯೊಳಗಿನ ಮೌನ
ಮಾತಾಗುವಂತೆ
ಮಾತೊಳಗಿನ ಗೌಣ
ಬದುಕಾಗುವಂತೆ
ಚಿತ್ರ ವಿಚಿತ್ರಗಳಾಚೆ
ಸಚಿತ್ರಗಳದೇ ಕಂತೆ
ಸತ್ವದೊಳಗಿನ ಸುತ್ತ
ಉಳಿದು ಹೋಗುವ ಸಂತೆ
ಸುತ್ತುವ ಸುಳಿವ
ಸುಳಿಗಾಳಿಗೂ ಕೇಂದ್ರ
ಬಿಂದು ನಂಟಂತೆ
ಮನದೊಳಗಿನ ಬಿಂದು
ಒಲವು ಅಂದಂತೆ
ನಾಗರಾಜ ಬಿ.ನಾಯ್ಕ
ಒಳ್ಳೆಯ ವಿಚಾರ ಪೇಪರನಲ್ಲಿ ಮೊಡಿದೆ ನಿನ್ನ ವಿಚಾರಗಳಲ್ಲ ಈ ರೀತಿ ಪ್ರಕಟ ಪಡಿಸುತ್ತಲೇ ಇರು ಅದು ಮನಸ್ಸಿನಲ್ಲೇ ಇದ್ದು ಹುದುಗಿ ಹೋಗದಿರಲಿ
ಉಮೇಶ