ಪ್ರಮೋದ ಜೋಶಿ ಧಾರವಾಡ ಕವಿತೆ ಜೀವನ ಗಾಡಿ

ಜಿವನ ಗಾಡಿ ಚಲಿಸಿದೆ ನೋಡಿ
ನಾಗಲೋಟದಿ ತಾ ಮುಂದೋಡಿ

ಕಾಲನಿಯಮ ಅರಿತುಕೊಂಡು
ಕಾಲಚಕ್ರ ಹಚ್ಚಿಕೊಂಡು
ಉರುಳಿ ಉರುಳಿ ಸಾಗುತಿಹುದು
ಕಾಲಗಿಂತಾ ತಾ ಮುಂದು ಎಂದು

ಬಾಲ್ಯ ಯೌವನ ತಾಣವ ದಾಟಿ
ಗೃಹಸ್ತ ನಿಲ್ದಾಣದೊಳಗೆ ತಂಗಿ
ಸಂಗಾತಿ ಬೋಗಿ ಪಡೆದುಕೊಂಡು
ಸಂತಸದಿ ತಾ ಚಲಿಸಿದೆ ನೋಡಿ

ಚಲಿಸುವ ಈ ಸಂತಸ ಗಾಡಿ
ಬೆಳೆಯಿತು ಇಂದು ಇಮ್ಮಡಿಯಾಗಿ
ಸಂಸಾರ ಭಾರ ಎಳೆಯುವ ಗಾಡಿ
ಚಲಿಸಿತು ಮುಂದೆ ಸಂಜ್ಞೆಯ ನೋಡಿ

ಕೊನೆಯ ನಿಲ್ದಾಣದಲ್ಲಿ ತಾನು
ಎಲ್ಲ ಬೋಗಿ ಕಳಚಿಕೊಂಡು
ಸಾಗಿತು ಗಾಡಿ ಮುಂದೆ ಮುಂದೆ
ತಿರುಗಿ ನೋಡದಂತೆ ಹಿಂದೆ


3 thoughts on “ಪ್ರಮೋದ ಜೋಶಿ ಧಾರವಾಡ ಕವಿತೆ ಜೀವನ ಗಾಡಿ

Leave a Reply

Back To Top