ಕಾವ್ಯ ಸಂಗಾತಿ
ಎಸ್ ಎಸ್ ಜಿ ಕೊಪ್ಪಳ
ಗುರುವಿಗೊಂದು ಅರಿಕೆ
ಮಕ್ಕಳ ರಿಕ್ತ ಮನಸಲ್ಲಿ
ಬಿತ್ತಿ ಬೆಳೆಯೋ ನೀನು
ಸದಾಚಾರ ಸದ್ವಿಚಾರ.
ಭಾವನೆಗಳ ಸಾಕಾರ
ಆಗದಿರಲೆಂದೆಂದೂ
ಮಗು ನಿರಾಕಾರ.
ಹಸಿ ಮಣ್ಣಿನ ಮುದ್ದೆಗೆ
ರೂಪಕೊಡುನೀ ಶಿಕ್ಷಕ,
ಅದಾಗಲಿ ಸುಂದರ
ವಾದ ದಿವ್ಯ ಮೂರ್ತಿ
ಆಗ ಬೆಳಗಲಿ ಜಗದಲಿ
ಸಕಲ ಕಳಶ ಕೀರ್ತಿ
ನೀನಾಗು ಸುಂದರ
ಶಿಲ್ಪ ತಯಾರಿಕೆಯ ಶಿಲ್ಪಿ
ಜಗವೇ ನಮಿಸುವುದು
ಕೈ ಎತ್ತಿ ಸದಾಕಾಲ,
ಓ ಗುರುವೇ ,
ನಿನಗಿದೋ ನಮನ
ನೀನಾಗು ಮನವೇ
ಕರ್ತವ್ಯ ಪಾಲಕ
ನಿನಗಾಗುವುದು ಲೋಕ,
ಮೂಕ ಪ್ರೇಕ್ಷಕ
ಹೊರ ಹೊಮ್ಮಲಿ.
ಮಗುವಿನ ಆದರ್ಶ ಜಾತಕ
ನಿನಗಾಗಿ,ನನಗಾಗಿ, ಬೇರೆಯವರಿಗಾಗಿ
ಬದಲಾಗು.
ಉತ್ತಮ ಗುರುವಾಗಿ.
ಜಗ ಬೆಳಗಲಿ ನಿತ್ಯ
ಪ್ರಕಾಶ ಪ್ರಭೆಯಾಗಿ
“ಗುರು” ಎಂದೆಂದಿಗೂ
“ಗುರು”ವೇ
ಆ ಶ್ರೇಷ್ಠತೆ ಎಂದೂ
“ಹ ಗುರು” ಆಗದು.
ಜಗದ ಶಕ್ತಿಯಾಗಿ ನೀವಿರಲು ಸೋಲೇ. ಎಂಬುದಿಲ್ಲ ನಮಗಿಲ್ಲಿ.
ಯಾರೂ ಕದಿಯದ
ಕಸಿಯದ ವಿದ್ಯೆಯ
ಒಡಲು ನೀ ಗುರುವೇ
ಕ್ಷಮೆಯ ಕಡಲು ನೀನು
ಕರುಣಾಮಡಿಲುನೀನು
ಹೊಟ್ಟೆಗೆ ಊಟ.
ಇರದವರಿಗೂ ಬೇಕು,
ನೆತ್ತಿಯ ಬುತ್ತಿ.
ಅದು ಸಲಹುವದು
ಸರ್ವ ಜನರನ್ನು.
ಆಸ್ತಿ ಸಂಪಾದನೆಗಿಂತ
ಆಸ್ತಿಯಾಗುವವರ
ಗಳಿಕೆ ನಿನ್ನ ಕಾಯಕ.
ವಿದ್ಯಾದಾನ ಸರ್ವ.
ದಾನಕ್ಕೂ ಮಿಗಿಲು.
ದೇವರ ಇರುವಿಕೆ ತಿಳಿಸುವ
ನಿಮ್ಮಕೆಲಸ ಧರೆಯಲ್ಲಿ
ದೊರೆಯಾಗಿಎಲ್ಲಾ
ವಿಕಲತೆ ತಡೆಯುವ ದಿವ್ಯ ಕೆಲಸ.
——————————-
ಎಸ್ ಎಸ್ ಜಿ ಕೊಪ್ಪಳ
ಅದ್ಭುತ ಕವಿತೆ ಮೇಡಂ
ಧನ್ಯವಾದಗಳು