ಕಾವ್ಯ ಸಂಗಾತಿ
ಅಶ್ಫಾಕ್ ಪೀರಜಾದೆ
ಜಲಪ್ರಳಯ
ನಿನ್ನಾತ್ಮಗಡಲಿನ ಅಬ್ಬರ
ಈ ಇಳಿ ಸಂಜೆ ಧರೆಯೊಂದಿಗೆ ಇಳೆ
ಮಾತಿಗಿಳಿದಿದೆ ಮಾತು
ಕೆಂಡಮಳೆಯಾಗಿ ಸುರಿದರೆ
ಜಲಾಗ್ನಿ ಹೊಳೆಯಾಗಿ ಹರಿಯುವದನ್ನ
ನೋಡುತ್ತ ದಿಗ್ಭ್ರಮೆಗೊಂಡು ಕುಳಿತ
ಅವ್ಯಕ್ತ ಸಂವೇದನೆಯ ಅಭಿವ್ಯಕ್ತಿ !
ರುದ್ರಾವತಾರ ಇಡೀ ವಿಶ್ವವನ್ನೆ
ತನ್ನ ತೆಕ್ಕೆಗೆ ಆಹ್ವಾಯಿಸಿಕೊಳ್ಳಲು ಆರ್ಭಟಿಸುತಿರೆ ತೆಲೆತಿರುಗಿದ ಹುಚ್ಚನಂತೆ
ಭೋರ್ಗೆರೆಯುವ ಜಲಪಾತದೆಯಾಳಕ್ಕೆ
ಧುಮಿಕ್ಕಿ ಅಷ್ಟೇ ರಭಸದಿ
ಮತ್ತೆ ಆಗಸದೆತ್ತರಕ್ಕೆ ಚಿಮ್ಮುವ ಅಲೆಗಳು
ಭೂಮ್ಯಾಕಾಶದ ನಡುವಿನ
ತಂಪು ಹಬೆ ಹೊಗೆಯ ಕೋಲಾಹಲ !
ಎದೆಯಂಗಳಗಳಲಿ ಕಡಲ ಕಂಪನ
ಇದೇ ರುದ್ರ ರಮಣೀಯ ದೃಶ್ಯ
ಸೂರ್ಯ ಚಂದ್ರ ತಾರೆಯರೆಲ್ಲ
ನಿನ್ನ ಬೀಕರ ರೂಪಕ್ಕೆ ಬೆದರಿ
ದಿಕ್ಕು ತಪ್ಪಿ ಅದೆಲ್ಲೋ ಅವಿತವೋ
ಮೋಡ ಮುಸಕಿದ ಅಪಾಯದ ಮಟ್ಟ
ನೀನು ಜೀವಜಲ ಸಂಜೀವಿನಿ ಲೀಲಾಜಾಲವಾಗಿ ಧರೆಗಿಳಿದು ಧಾರೆಯಾಗಿ ಮನಕೆ ಮುದ ನೀಡುವ ಸುಂದರಿ
ಅದ್ಯಾರ ಮೇಲಿನ ಮುನಿಸಿಗೆ
ಮಾರಿ ಆದೇಯೋ ಗಿಡ ಮರ
ನೆಲ ಜನ ದನಕರುಗಳೆಲ್ಲದರ ಮೇಲೆ
ನಿನ್ನ ಉಗ್ರ ಪ್ರತಾಪ ತೋರುತಿರುವೆ
ನೀನು ಬಳ್ಳಿಯಂತೆ ಬಳಕುತ
ಬಳಕುತ ಹೂವಿನಂತದ್ದರೆ ಚೆಂದ
ರುದ್ರ ನೃತನಗೈಯುವ
ನರ್ತಕಿಯಾದರೆ ಸಾಕು
ಸಾಕ್ಷಾತ್ ಪ್ರಳಯ
ರಾಕ್ಷಸಿಯಾಗಬೇಡ ಪ್ಯಾರಿಯಾಗು
ನಿನ್ನ ನಂಬಿ ಕೂತವರನ್ನು
ಕೊಲ್ಲದಿರು ದಯೆದೋರಿ ರಕ್ಷಿಸು.
ಅಶ್ಫಾಕ್ ಪೀರಜಾದೆ.
ತುಂಬಾ ಸುಂದರ