ಕಾವ್ಯ ಸಂಗಾತಿ
ಶೋಭಾಮಲ್ಲಿಕಾರ್ಜುನ್
ಹಾಯ್ಕುಗಳು
ಮುಗಿಲ ತುಂಬ
ತುಂಬೈತಿ ಚುಕ್ಕಿ ಕಣ್ಣ
ಹೊಳಪಿನಂತೆ
ಮನದ ತುಂಬಾ
ಹಾರೈತಿ ಪ್ರೀತಿ ಹಕ್ಕಿ
ಒಲವಿನಂತೆ
ಕಣ್ಣ ಬಾಣಕೆ
ಅಂಗುಲಂಗುಲ ನಾಚಿ
ನೀರಾಗಿಹಳು
ಸವಕಲಾಗದ
ಸವಿ ನೆನಪುಗಳ
ಸಾಧ್ವಿ ಇವಳು
ಬಿರು ಬಿಸಿಲು
ತಂಪು ತಂಗಾಳಿಯಂತೆ
ಅವಳಿರಲು
ಸಪ್ತಸಾಗರ
ದಾಟ ಬಲ್ಲೆನು ಪ್ರೀತಿ
ಜೊತೆಗಿರಲು
ಒಲವಿಂದಲೇ
ನಮ್ಮೀರ್ವರ ಬದುಕು
ಅರಿತಿಹೆನು
ಹೂದುಂಬಿಯಾಗಿ
ಮಕರಂದ ಸವಿದು
ಬದುಕಿಹೆನು
ಶೋಭಾಮಲ್ಲಿಕಾರ್ಜುನ್
ಚಂದ
ಚೆನ್ನಾಗಿದೆ