ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವನೌನ ಏನಾರ ಆಗ್ಲಿ ಇವತ್ತ ಅಕೀಗೆ
ಮುತ್ತ ಕೊಟ್ಟ ಕೊಡಬೇಕಂತ ಬಾಗಲ ಬಡದೆ!
ಅವರವ್ವ ಬಾಗಲ ತಗದ್ಲು,  ಮಕ್ಕಳಿಗೆ  ತಪ್ಪದೇ ಪೋಲಿಯೋ ಡ್ರಾಪ್ಸ ಹಾಕ್ಸಿ ಅಂತ್ಹೇಳಿ ಬಂದೆ!!
***
ನಿನ್ನ ಪ್ರೀತಿ ಅನ್ನೋದು ನನಗ ಎರಡು ಸಾವಿರ
ರೂಪಾಯಿ ಹೊಸ ನೋಟ್ ಕಂಡಂಗಾಗತೈತಿ!
ಆದ್ರ ಭಯಾನೂ ಶುರು ಆಗಾಗ ಹತ್ತೇತಿ
ಅದು ಒರಿಜಿನಲ್ಲೋ…ಡುಪ್ಲಿಕೇಟೋ ಅಂತ !!
**
ಈ ಪ್ರೀತಿ ಮಹಿಮೆ ಏನಂತನ
ಅರ್ಥ ಆಗೂದ ಇಲ್ಲ
ಪ್ರೀತಿಸಿದವಳು ಸಿಕ್ಕ ಖುಷಿಗೆ ಕೆಲವರಿಗೆ
ಹುಚ್ಚ ಹಿಡಿತೈತಿ!
ಪ್ರೀತಿಸಿದವಳು ಕೈ ಕೊಟ್ಟಿದ್ದಕ್ಕೂ ಕೆಲವರಿಗೆ
ಹುಚ್ಚ ಹಿಡಿತೈತಿ!!
**
ಅಕಿ ಸಣ್ಣಕಿದ್ದಾಗ ಅಕಿ ಬ್ಯಾಗನ್ಯಾಗಿಂದ ಒಂದ
ಪೆನ್ಸಿಲ್ ಕದಿಯಾಕೂ ಆಗಿರಲಿಲ್ಲ ನನಗ !
ಆದ್ರ, ಅಕೀ ದೊಡ್ಡಾಕಿ ಆದಮ್ಯಾಲ ನನಗ
ಗೊತ್ತಿಲ್ಲದಂಗನ ನನ್ನ ಎದಿಯಾಗಿನ  ಪ್ರೀತೀನ
ಕದ್ದ ಬಿಟ್ಟಾಳ…..ಮನಸ ಗೆದ್ದ ಬಿಟ್ಟಾಳ!!
**
ನನ್ನಷ್ಟ ನಿನ್ನ ಪ್ರೀತ್ಸೋರು ಹಿಂದೂ
ಯಾರು ಇರಲಿಲ್ಲ ಮುಂದೂ ಯಾರೂ ಬರೋದಿಲ್ಲ!
ನಿನ್ನ ನಾನೆಷ್ಟ ಪ್ರೀತಸ್ತೀನಿ ಅಂತ
ಎಲ್ಲಾ ಹೇಳೋ ಗೂಗಲ್ ಗೂ ಹೇಳಾಕ್ಕಾಗಲ್ಲ!!

—————————————-

About The Author

2 thoughts on “ಪರಮೇಶ್ವರಪ್ಪ ಕುದರಿ-ಕನ್ನಡ ಶಾಯಿರಿಗಳು”

  1. ಒಂದಕ್ಕಿಂತ ಒಂದು ಕಚಗುಳಿ ಇಡುವ ಶಾಯರಿಗಳು ಸರ್. ಮುಂದುವರೆಸಿ

Leave a Reply

You cannot copy content of this page

Scroll to Top