ಸವಿತಾ ದೇಶಮುಖ ಅವರ ಕವಿತೆ-ಬೇಟೆ

ಪ್ರೀತಿ -ಪ್ರೇಮದ ದಾಟಿಯ
ನಾನರಿಯೇ….ಅದರ
ನಾದ-ತಾಳ- ಸ್ವರಗಳ
ಭ್ರಾಂತಿಯಿಂದ ದೂರ ದೂರ
ಇಳುವಿ ಪ್ರೀತಿಯ- ಭಾರ..
ಅವಳು ಹೇಳಿದವಳು
ಅದೊಂದು ದಿನ ಕಥೆಯ….

ಅಂದು ಅನುರಾಗ ಮೈದಳೆದು
ನಳಿ ನಳಿಸಿ ಮನದಲ್ಲಿ,ಜಗದ
ಶಿರಿಯನೆ ಗೆದ್ದೆನೆಂಬುವ
ಭಾವದಿ,ತೃಪ್ತಿಯ ಹೊನಲಲಿ
ತೇಲಾಡಿದ ಪ್ರೇಮದಿ ಮೈ
ಮರೆತು ನಲುಗಿದ ದಿನ

ಅಂದು ಗಂಡು ಜಾತಿಯೆಂದು
ಅರ್ಥೈಸದ ಅವಳೆದೆಯಒಲವು
ಮುಳುಗಿತ್ತು ಪ್ರೇಮ ಪಯಣದಿ, ಅವನು ಧರಿಸಿ ಒಲುವಿನ ಮುಖವಾಡ ಬಳಸಿ ಅವಳ
ಅಂಗಾಂಗವ ಮುದಗೊಳ್ಳುತ್ತ
ಮನದಲ್ಲಿ ಎದ್ದು ಹೊರಟನು…

ಗೆಳೆಯನಿಗೆ ಹೇಳಿದನು
ಗೆದ್ದೆ ಇನ್ನೂರವಳ….
ಬಿಗುಮಾನದಿ-ಅಭಿಮಾನದಿ
ಕ್ಷೀಣಿಸುತ ಅವನ ಎದೆಯ- ಪ್ರೇಮ… ಹೊರಟು ನಿಂತಾನು ಮುಂದಿನ ಬೇಟೆಗೆ ಮೇಲು ನಗುವ ಬೀರುತಾ


3 thoughts on “ಸವಿತಾ ದೇಶಮುಖ ಅವರ ಕವಿತೆ-ಬೇಟೆ

  1. “ಬೇಟೆ” ಕವಿತೆ ಚೆನ್ನಾಗಿ ಮೂಡಿಬಂದಿದೆ ಸವಿತಾ ಮೇಡಂ

Leave a Reply

Back To Top