ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಗೊಂಬೆಗಳ ಕಣ್ಣೀರು
ಅಂದು ನಾವು
ಅಪ್ಪ ಅವ್ವನನ್ನು
ಕಾಡಿ ಬೇಡಿ
ಗೊಂಬೆಗಳಿಗಾಗಿ
ಅಳುತ್ತಿದ್ದೆವು
ಜಾತ್ರೆ ಉತ್ಸವದಲ್ಲಿ
ಹಿರಿಯರಿಗೆ ದೇವರ
ಮೇಲಿನ ಭಕ್ತಿ
ನಮಗೋ ಬಣ್ಣ ಬಣ್ಣದ
ಗೊಂಬೆಗಳ ಮೇಲೆ ಆಸಕ್ತಿ
ಅವ್ವ ಹೇಗೋ ಮಾಡಿ
ಅಪ್ಪನ ತುಡುಗಿನಲಿ
ತನ್ನಲಿದ್ದ ದುಡ್ಡು ಕೊಟ್ಟು
ತಂದಳು ಗೊಂಬೆಗಳ
ಮಿತಿ ಇರಲಿಲ್ಲ ಆನಂದಕೆ
ಮುಗಿದ ಶಾಲೆಯ ಪಾಠ
ದಿನವಿಡೀ ಅವುಗಳ
ಜೊತೆಗೆ ನಮ್ಮ ಆಟ
ದಣಿವು ಬೇಸರ ಮಾಯ
ಗೊಂಬೆಗಳ ಜೊತೆಗೆ ನಿದ್ರೆ
ಮೊನ್ನೆ ನಾನು ಕಪಾಟ
ನೋಡಿದೆ ನಾವು ಆಡಿದ
ಗೊಂಬೆಗಳಿದ್ದವು
ನಮ್ಮ ಮಕ್ಕಳು ಆಡಲೆಂದು
ಹೊರ ತೆಗೆದು ಇಟ್ಟೆ
ಮನೆಯಲ್ಲಿ ಕಂಪ್ಯೂಟರ್
ಮೊಬೈಲ್ಗಳ ಹಾವಳಿ
ಪಾಶ್ಚಿಮಾತ್ಯ ಸಂಗೀತದ ದಾಳಿ
ಏಕಾಂಗಿ ಗೊಂಬೆಗಳ ಕಣ್ಣೀರು
ಆಡಲು ಮಕ್ಕಳ ಕರೆದವು ಬಿಕ್ಕಿ ಬಿಕ್ಕಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
Excellent poem
ನಮ್ಮ ಚೆಂದದ ಬಾಲ್ಯವನ್ನು ಕಟ್ಟಿಕೊಟ್ಟ ಮತ್ತು
ಇವತ್ತಿನ ಮಕ್ಕಳ ವಿಷಾಧನೀಯ
ಪರಿಸ್ಥಿತಿಯನ್ನು ಬಿಂಬಿಸುವ ಕವನ ಎಲ್ಲರ
ಮನವನ್ನು ತಟ್ಟುತ್ತದೆ
ಗೊಂಬೆಗಳ ಕಣ್ಣೀರು.. ಶೀರ್ಷಿಕೆಯಲ್ಲೇ ಎಲ್ಲವೂ ಅಡಗಿದೆ
ಸುಶಿ