ನಾಗರಾಜ ಜಿ. ಎನ್. ಬಾಡ ಕವಿತೆ-ಇತಿ ಮಿತಿ

ಜೀವನದಿ
ಇತಿ ಮಿತಿಯ
ಅರಿವಿರಲಿ
ಮಾತಿನಲಿ ನಯ
ನಾಜೂಕಿರಲಿ
ಚುಚ್ಚುವ ನುಡಿ
ಸುಳಿಯದಿರಲಿ
ನೇರ ನುಡಿಯಿರಲಿ
ಮತಿ ಮಂಥಿಸುತ
ಹದವಾಗಲಿ
ಮನದ ಮಾತು
ಸ್ಪಷ್ಟವಾಗಿರಲಿ
ನೋಯಿಸುವ ಮಾತು
ಬಾರದಿರಲಿ
ಅಕ್ಕರೆಯ ಸಕ್ಕರೆಯ
ಮಾತಿರಲಿ
ದ್ರೋಹದ ಚಿಂತನೆಯು
ಎಂದಿಗೂ ಮನದಿ
ಸುಳಿಯದಿರಲಿ
ಮೋಹದ ಮಾತಿಗೆ
ಸಿಲುಕಿ ಕೊರಗದಿರಿ
ಮನದ ಮಾತಿಗೆ
ಕಿವಿಯಾಗಿ
ಚಾಡಿ ಮಾತಿಂದ
ದೂರಾಗಿ
ಹಿರಿಯರ ಅನುಭವಕ್ಕೆ
ತಲೆಬಾಗಿ
ಚಿಣ್ಣರ ಮಾತಿಗೆ
ಬೆರಗಾಗಿ
ಮುಗ್ಧತೆಯ ಜೊತೆ
ಜೊತೆಗೆ ಪ್ರಭುದ್ಧರಾಗಿ
ಗೆಲುವಿಗಾಗಿ ಹಂಬಲಿಸುತ
ಮುನ್ನುಗ್ಗಿ
ಜೊತೆಯಾಗಿ ಸಮಾಜದ
ಸೌಖ್ಯಕ್ಕಾಗಿ ಹಿತಕ್ಕಾಗಿ
ನಮ್ಮೆಲ್ಲ ಬಾಂಧವರ
ಏಳ್ಗೆಗಾಗಿ
ಉಜ್ವಲ ಭವಿಷ್ಯಕ್ಕಾಗಿ


One thought on “ನಾಗರಾಜ ಜಿ. ಎನ್. ಬಾಡ ಕವಿತೆ-ಇತಿ ಮಿತಿ

Leave a Reply

Back To Top