ಕಾವ್ಯ ಸಂಗಾತಿ
ಜಿ.ಎಸ್.ಹೆಗಡೆ
ಆಷಾಢದ ಸೊಬಗು
ಬುವಿಯಾಕಾಶಕೆ ಜಲಸೇತು ಬಂಧನವು
ಭಾವಾನುರಾಗಗಳ ಸರಸ-ಸಲ್ಲಾಪವು
ಬುವಿಯೆನ್ನುವ ತರುಣಿಗೆ
ಹಸಿರು ಸೀರೆಯನುಡಿಸಿ
ಜಲಪಾತಗಳ ಸೃಷ್ಟಿಸುತ ಝರಿ ಸೆರಗಹಾಕಿ
ಹಸಿರು ತುಂಬಿದ ತರುವು ಫಲಭರಿತ ತೆಂಗುಗಳು
ಬಾಗುತಲೋಲಾಡುತ ತಳಿರು ತೋರಣವು
ನೆನೆದಿರುವ ನದಿಹಳ್ಳ ತುಂಬು ಗರ್ಭಿಣಿಯಾಗಿ
ದಡಗಳಂಚಿಗೂ ಮೀರಿ ಜಲನಿಧಿಯು ತುಂಬಿ
ಭೂರಮೆಯ ತನುವಿನೊಳು ಜಲಧಾರೆಯಿಂಗುತಲಿ
ಧರೆಗಳಂಚಲಿ ಶುಭ್ರ ನೀರೊರತೆ ಸೃಷ್ಟಿ
ಗುಡುಗುಮಿಂಚುಗಳಿಲ್ಲ ಜಲಧಾರೆ ಬಿಡುವಿಲ್ಲ
ನೇಸರನ ದರ್ಶನವು ನೆನಪಿನಂಗಳದಾಟಿ
ಕತ್ತಲೆಯ ಹಗಲಿನೊಳು ಇರುಳೆಂಬ ಭಾವನೆಯು
ಮನೆಯೊಳಗೆ ಅವಿತಿರುವೆನೆಂಬ ಅಂಜಿಕೆಯು
ಹಾಯಿದೋಣಿಗಳಿಲ್ಲ ಹಕ್ಕಿ ಕಲರವವಿಲ್ಲ
ತೇಲಿ ಹೋದವೆಯೆಲ್ಲ ಆತಂಕದೊಡಲು
ಗರಿಮುದುರಿ ಗೂಡಿನೊಳು ಬೆಚ್ಚಗೆಂದೆಣಿಸದಿರು
ಮನೆಯೊಳಗಿದ್ದವಗೆ ನೆಲದಲೇ ಬಿರುಕು
ಹೂವಿಲ್ಲ ಫಲವಿಲ್ಲ ಒಡಲು ತುಂಬುವುದೆಂತು?
ನೀರು ಕುಡಿದರೆ ಇಂಗುವುದೇ ಹಸಿವು?
ಆಷಾಢ ಮಾಸದೊಳು ನೀರಿದ್ದೂ ಬರಗಾಲ
ಕಟ್ಟಿಇಟ್ಟಿಹ ಬುತ್ತಿ ನೀಡುವುದೇ ಬಲವ?
ಕೆರೆಕಟ್ಟೆಗಳು ತುಂಬಿ ನದಿಪಾತ್ರಗಳು ಮಿಕ್ಕಿ
ಜೀವ ಕಳೆಯದಿರಲಿ ಪ್ರಕೃತಿಯು ಮುನಿಸಿ
ಜಿ.ಎಸ್.ಹೆಗಡೆ
ಸೊಗಸಾಗಿದೆ
ನದಿಹಳ್ಳಗಳು ತುಂಬು ಗರ್ಭಿಣಿಯ ನೆನಪನ್ನು ತರುತ್ತವೆ ಎಂಬ ಉಪಮೆ ತುಂಬಾ ಅರ್ಥಕರ ಎನಿಸಿತು.
“ನೀರು ಕುಡಿದರೆ ಇಂಗುವುದೇ ಹಸಿವು” ಎಂಬಲ್ಲಿನ ಹತಾಶೆಯ ಭಾವ ಎಚ್ಚರಿಕೆಯ ದನಿಯಾಗಿ ಮೂಡಿದೆ.
ಧನ್ಯವಾದಗಳು
ಸೊಗಸಾಗಿದೆ
Thank you
ತುಂಬ ಸೊಗಸಾಗಿ ಮೂಡಿಬಂದಿದೆ.
Excellent Sir
Thank you sir
ತುಂಬಾ ಸೊಗಸಾದ ಕವನ. ಚಂದದ ಸಾಲುಗಳು.
Thank you
Excellent, Super aagi eddu. Thumba artha koduva prakrathiya sobagina varnane chennagi eddu
Excellent, Super aagi eddu.Thumba artha koduva prakrathiya sobagina varnane chennagi eddu – Savitri Hegde
Super
thank you
ಆಷಾಢದ ಸೊಬಗು ಈ ಕವನವು ತುಂಬಾ ಸೊಗಸಾಗಿ ಮೂಡಿ ಬಂದಿದೆ. ಇದೊಂದು ಅದ್ಭುತ ಕವನವಾಗಿದೆ.
Thank you
*ಉತ್ತಮವಾದ ಕವಿತೆ . ಬರವಣಿಗೆಯಲ್ಲಿ ಶಬ್ದಗಳನ್ನು ಸುಂದರವಾಗಿ ಪೋಣಿಸಲಾಗಿದೆ ಪ್ರಸ್ತುತ ಪ್ರಕೃತಿಯ ಮುನಿಸಿನ ಅವಲೋಕನವಾಗಿದೆ*
Thank you
ಸೊಗಸಾದ ಹೋಲಿಕೆ ಹಾಗೂ ಭಾವ ಮಾಧುರ್ಯ..
Thank you
Super. Very strong person ede thara ennu songes moodi barali. Congratulations.
ವಾವ್! ಅದ್ಭುತ ಕವಿತೆ. ಜಲಪಾತ – ಜರಿ ಸೆರಗು, ನದಿಗಳು ತುಂಬು ಗರ್ಭಿಣಿ, ಮನೆಯ ನೆಲವೇ ಬಿರುಕು, ಅದ್ಭುತ ಪ್ರತಿಮೆಗಳು. ಇಂತಹ ಕವಿತೆಗಳು ಇನ್ನೂ ತಮ್ಮಿಂದ ಮೂಡಿಬರಲಿ
Thank you
Tumba Chennagidde
Thank you