ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-‘ಸೂತ್ರದಾರನೇ’

ಅರ್ಥವಾಗದ ಕರ್ತನೆ
ಸೂತ್ರ ಹಿಡಿದ ಸೂತ್ರಧಾರನೇ
ನೀನಾಡಿಸಿದಂತೆ ಆಡೋ
ಗೊಂಬೆಗಳು ನಾವು//

ನಿನ್ನ ಕೈಚಳಕದೆ
ನಮ್ಮ ಏಳುಬೀಳುಗಳೆಲ್ಲ
ನಿನ್ನಾಟದ ಪರಿಯಲೇ
ನಮ್ಮ ಸೋಲು ಗೆಲುವುಗಳೆಲ್ಲ //

ಜಗವನೆ ಬುಗುರಿ ಮಾಡಿ
ತಿರುಗುಸುತ್ತಿರುವೆ ಕಿಲಾಡಿ
ಹಿಡಿತ  ಗತಿ ಎಲ್ಲಾ ನಿನ್ನ ಕೈಯಲ್ಲೇ
ಇತಿಮಿತಿ ಸಡಿಲಿಸ್ೇಕೆ
ಎಸೆಯುತಿರುವೆ ಗಾಳ //

ಗೂಳಿಗಳ ಅಟ್ಟಹಾಸ
ಭ್ರಷ್ಟರ ಕೈಚಳಕ
ಕಪಟಿಗಳ ಕುತಂತ್ರ
ಆಗಿದೆ ಎಲ್ಲಾ ಅತಂತ್ರ
ಹೂಡಲಾರೆಯಾ ನೀನು ತಂತ್ರ
ಹಾಕಲಾರೆಯಾ ಮೂಗುದಾರ
ಹಿಡಿ ಮಂತ್ರ ದಂಡ//

ಗುರು ಮೇರು ನಾಟಕಕಾರ
ಎಲ್ಲಾ ನೀನೇ  ಎಲ್ಲ ಬಲ್ಲ ಮಲ್ಲ
ಚಾಟಿ ಲಾಟಿ ನಿನ್ನ ಕೈಯಲ್ಲೇ
ಏಟು ಪೆಟ್ಟು ಕೊಡದೆ
ಸುಮ್ಮನಿರುವ ಪರಿಯೇಕೇ//

ಜಗದೊಡೆಯ ನೀ
ಸೃಷ್ಟಿಯ ಸ್ವಾಸ್ಥ ನೆಮ್ಮದಿ
ನಗು ನಲಿವು ನಿನ್ನ ಕೈಯಲ್ಲೇ
ಹಿಡಿತವಿರಿಸು ಕಣ್ಣಿಡು
ಕಾಯೋ ತಂದೆ ಶಿವಹರನೇ//

ಶಿಲೆಯಲ್ಲಡಗದಿರು
ಗುಡಿ ಗುಹೆಯಲ್ಲಿ
ಅವಿತುಕೊಳ್ಳದಿರು
ಹಸಿರುಸಿರಲಿ
ಹದುಳ ಮನಗಳಲಿ
ಸುಧಾತ್ಮರಲಿ ನೆಲೆಗೊಳ್ಳು //

ತಿದ್ದಿ ತಿಡಿ ಅಂದಗೊಳಿಸು
ಕಳೆ ಕಸ ಕಿತ್ತೆಸೆದು
ಸೂಚಿಗೊಳಿಸು ಮನಗಳ
ಹಸನಾಗಿಸು ಎಲ್ಲ ನಗಿಸು
ಶಾಂತಿ ಸಹಬಾಳ್ವೆಯಿಂದ ಬಾಳಿಸು//

ಮನುಜನಟ್ಟಹಾಸ ಮಟ್ಟಹಾಕು
ಹುಡುಗಾಟಕ್ಕೆ ಬೇಲಿ ಹಾಕು
ತಧಿಕಿ ತಟ್ಟುತ್ತಿರು
ಕುಟ್ಟುತಿರು ಕೆಟ್ಟ ಗುಣಗಳ
ಮೆಟ್ಟಿ ನಿಲ್ಲು ಇವನ ಆಟಾಟೋಪ//

ನೀನರಿಯದ್ದೇನಿದೆ ಇಲ್ಲಿ
ಆದರೂ ಕೇಳು ನನ್ನ
ಬಿನ್ನಹ ಈ ಮೊರೆ
ಭಕುತಳ ಹೃದಯದಳಲು
ಕಾಪಾಡು ಜಗದ ದೊರೆ//


Leave a Reply

Back To Top