ಎಂ. ಬಿ. ಸಂತೋಷ್ ಅವರ ಹಾಯ್ಕುಗಳು

ತೋರಬೇಡವೇ
ನೀ ಗತ್ತು, ಕಾಯಲಾರೆ
ನಾ ತುಂಬಾ ಹೊತ್ತು

ಮರಣವಿಲ್ಲ
ಸಾಹಿತಿಗೆ, ಕೃತಿಯು
ಸಮಾಜದಲ್ಲಿ

ಕುಡಿಯಬೇಡ
ದೊರೆ ಹೊತ್ತಿರುವೆ ನಾ
ವಂಶದ ಹೊರೆ

ಹಣವಿಲ್ಲದ
ಬಾಳು ಕಲಿಸುವುದು
ನೂರೆಂಟು ಪಾಠ

ದುಃಖಿಸುತ್ತಾಳೆ
ಅಮ್ಮ, ತಪ್ಪು ದಾರಿಗೆ
ಮಗ ಹೋದಾಗ

ತುಂಬಿದ ಹೊಟ್ಟೆ
ಬದುಕಲ್ಲಿ ಸಾಕಷ್ಟು
ಅಟವಾಡುತ್ತೆ

ಸತ್ಯ ಶಬ್ದಕ್ಕೆ
ಮರಣ ಎನ್ನುವುದು
ಇರುವುದಿಲ್ಲ

ಸಾಧನೆಯಲ್ಲಿ
ನಾ ಸೋತಿರಬಹುದು
ಇನ್ನೂ ಸತ್ತಿಲ್ಲ


One thought on “ಎಂ. ಬಿ. ಸಂತೋಷ್ ಅವರ ಹಾಯ್ಕುಗಳು

Leave a Reply

Back To Top