ಗುರು ಪೂರ್ಣಿಮೆಯ ವಿಶೇಷ-ಮಾಲಾ ಹೆಗಡೆ

ಸುಜ್ಞಾನದ ಮಾರ್ಗದಲ್ಲಿ
ಸನ್ನಡತೆಯ ಸಾರ,
ಗುರುವೆಂಬುದದು ಬಾಳಿಗೆ
ಅತ್ಯಮೂಲ್ಯ ವರ.

ಮಸ್ತಕದ ಗುಡಿಯಲ್ಲಿ ಹಚ್ಚುವ
ಅರಿವಿನ ಪ್ರದೀಪ,
ಅಜ್ಞಾನವಳಿಸಿ ಸುವಿಚಾರವನ್ನೇ
ಹಂಚುವ ಕಲ್ಪ.

ಅನೀತಿ ಅಸತ್ಯಗಳೆoಬ
ಅಂಧಕಾರದ ಶಮನಕ
ಸುಪ್ತ ಪ್ರಜ್ಞೆಯ ಪ್ರತಿರೂಪ
ಅಕ್ಷರ ಆರಾಧಕ.

ಸದೃಢ ಸಮಾಜದ ನೆಲೆಯ
ರೂವಾರಿಯೀತ,
ಸಮತೆ ಸಹಬಾಳ್ವೆಯ
ಸ್ಫೂರ್ತಿ ಜ್ಯೋತಿದಾತ.

ವಕ್ರತೆಗೆ ಆಕೃತಿಯ ವರವನ್ನೇ
ಕೊಟ್ಟು,
ಸ್ವೀಕೃತ ಸುಸoಸ್ಕೃತಿಯ
ಸರಸ್ವತಿಯ ಹುಟ್ಟು.

ಕಾಣದಿಹ ಗುರಿಗಿವ
ದಿಕ್ಸೂಚಿಯ ಸೆಲೆ,
ಕಳುವಾಗದ ತಿಳಿವು ಈಯ್ವ
ಕಟ್ಟಲಾಗದು ಬೆಲೆ.

2 thoughts on “ಗುರು ಪೂರ್ಣಿಮೆಯ ವಿಶೇಷ-ಮಾಲಾ ಹೆಗಡೆ

Leave a Reply

Back To Top