ಕಾವ್ಯ ಸಂಗಾತಿ
ಡಾ.ಡೋ.ನಾ.ವೆಂಕಟೇಶ
ನನಸು ಕಂಡ ಕನಸು
ನೀ ಬರೆ ಅಂದರೆ
ಬರಿಯಲಿಕ್ಕೇನಿದೆ ಬರೇ ಮಣ್ಣು!
ವಂಶ ವೃಕ್ಷ ದ ಪೊಟರೆಯೊಳ ಹೊಕ್ಕು
ಹೊಕ್ಕುಳ ಬಳ್ಳಿಯ ಸುತ್ತುಗಳ ಬರೆಯಲೇ
ಬಾಗಿಲಿಂದಾಚೆ ನಿಂತು ಕಿಟಕಿಯಲ್ಲಿ
ಇಣುಕಿ ಕಂಡ ಕನಸನ್ನು ಬರೆಯಲೇ
ಜೀವಿಸಿದ್ದ ಲೆಕ್ಖದ ಪುಸ್ತಕ ಹುಡುಕುತ್ತಲೇ ಇದ್ದ
ನಟನೆಯನ್ನು ಬರೆಯಲೇ
ಅವನು ಅಂಗಳದಲ್ಲಿ ನಡೆದಿದ್ದು
ಇವಳು ತೋಟದಲ್ಲಿ ಕುಣಿದಿದ್ದು,
ತೋಳ ನೀರೊಳಗೆ ಹಾಕಿದ ಹೊಂಚು, ಮೊಸಳೆ ನೆಲದ ಮೇಲೆ ಹಾಕಿದ ಸಂಚು!
ಬರುತ್ತೇನೆ ತಾ ಎಂದು ಹೇಳುತ್ತ ಹೋದಾಕೆ
ಹೇಳದೇ ಹೋಗುತ್ತ ಹೋಗುತ್ತ
ಹೋಗುತ್ತಲೇ ಇದ್ದು-
ಇಲ್ಲಿಂದ
ಹೋಗೇ ಬಿಡುವ ಹೊತ್ತಿನಲಿ
ಸಂಜೆಗತ್ತಲಿನ ನಶೆಯಲ್ಲಿ
ಕಣ್ಣು ಮಂಜಾಗುವ ಗತ್ತಿನಲ್ಲಿ ನೆರಳಾಗ ಬಯಸಿದ್ದು-
ಏನೆಂದು ಬರೆಯಲಿ ಈ ಮಣ್ಣು
ಏನೆಂದು ಬರೆಯಲಿ ಈ ಕನಸು
ಹುಟ್ಟಿಂದಲೂ ಕಂಡ ನಿನ್ನ ನನಸು!!
ಡಾ.ಡೋ.ನಾ.ವೆಂಕಟೇಶ
Nice Bhavoji