ಬಾಗೇಪಲ್ಲಿ ಅವರ ಹೊಸ ಗಜಲ್

ಹೆಚ್ಚುಭಾಗ ಜಲಧರಿಸಿಹ ಜಲಂಧರೆ ಅಮ್ಮ ಭೂಮಾತೆ
ನೀಲವರ್ಣಾಂಬರೆ ನೀಲಾಂಬರಧರೆ ಅಮ್ಮ  ಭೂಮಾತೆ

ಸರ್ವ ಜೀವಕುಲಕೆ ಚೈತನ್ಯದಾಯಿ ವಸುಧೆ ನೀನಮ್ಮಾ
ನೋಟಕೆ ದಿವ್ಯ ಸುದರ್ಶಿನಿ ವಸುಂಧರೆ ಅಮ್ಮ  ಭೂಮಾತೆ

ಹಿಮಾಲಯಗಳ ಹೊತ್ತು ನಮ್ಮ ಬೆರಗು ಗೊಳಿಸುವೆ ತಾಯೆ
ಮಂಜು ನೀರಾಗಿ ನವ ಸಂಸ್ಕೃತಿ ಸೃಜಿಪ ಗಿರಿಧರೆ ಅಮ್ಮ ಭೂಮಾತೆ

ಗಿರಕಿ ಹೊಡೆದು ಮೋಡದ ವಲಯಾವೃತ ಕವಚಕೆ ಜನನಿ
ನಭದಿಂ ನೋಟಕೆ ಆಗುವೆ ಶ್ವೇತಾಂಬರಧರೆ ಅಮ್ಮ ಭೂತಾಯೇ.

ಕೃಷ್ಣಾ! ಕ್ಷಮೆಗೆ ಮತ್ತೂಂದು ಹೆಸರಲ್ಲವೇ ಅಯೀ ನೀನು
ಲಜ್ಜೆಗೆಟ್ಟ ನಾವು ಮಾಡಿಹೆವು ನಿನ್ನ  “ತ್ಯಾಜ್ಯಂಧರೆ” ಅಮ್ಮ ಭೂತಾಯೇ.

————————-

Leave a Reply

Back To Top