ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಭರವಸೆಯ ಹೊಂಬಾಳೆ

ಅವಳು ಕಟ್ಟಿದ ಗೂಡು
ಅವಳು ಮಾಡಿದ ಮಾಟ
ಹಾರಲೊಲ್ಲದು ಹಕ್ಕಿ
ಬಿಟ್ಟು ಪಂಜರ ಗೂಡು

ಬರುವುದು ಒಂದೊಮ್ಮೆ
ಬರುವ ಕಾಲದ ಬೆರಗು
ನನ್ನ ಗೆಳತಿಯ ಯೋಗ
ಸೂರ್ಯ ಚಂದ್ರರ ಬೆಳಕು

ಹಲವು ದಶಕದ ಪಯಣ
ಮುಗಿಯಲಾರದ ಗುರಿ
ಆಗಸಕೆ ಹಾರುವ ಗರಿ
ಹಾರಿ ಬಿಡುವ ಬಾ ಒಮ್ಮೆ

ಕಾಡು ಮರಗಳ ಮಧ್ಯೆ
ಸುಳಿವ ಗಾಳಿಯ ಸೋಂಪು
ಅರಳಿ ನಿಂತವು ಸ್ನೇಹ ಪ್ರೀತಿ
ಧರೆಯ ಮೇಲಿನ ನಗೆಯ ಹೂಗಳು

ಮೋಡಗಳು ಮೈ ಬಿಚ್ಚಿ
ಸುರಿಯುವ ಜಡಿ ಮಳೆಯ
ಹಸಿರು ಹುಲ್ಲಿನ ನೆಲದಿ
ಗಟ್ಟಿಗೊಳ್ಳಲಿ ಬದುಕು

ಸ್ವರ್ಗವೊ ನರಕವೊ
ನಾ ಕಾಣದ ಭಾಷೆ
ಪ್ರೇಮ ಒಲವಿನ ಮಾತು
ಭರವಸೆಯ ಹೊಂಬಾಳೆ


11 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಭರವಸೆಯ ಹೊಂಬಾಳೆ

  1. ಒಂದೊಳ್ಳೆಯ ಅದ್ಬುತವಾದ ಶೀರ್ಷಿಕೆಯೊಂದಿಗೆ ಪದಗಳ ಲಾಲಿತ್ಯದ ಸೊಗಡು ತುಂಬಿದ ಕವನ

    ಸುಶಿ

  2. ಸ್ವರ್ಗವೊ ನರಕವೊ ನಾ ಕಾಣದ ಭಾಷೆ
    ಸುಂದರ ಪ್ರತಿಮೆಯ ಪ್ರಯೋಗ ಸರ್

  3. ಭಾವಪೂರ್ಣ ಸುಂದರ ಕವನ ಸರ್

    ಡಾ ಗೀತಾ ಡಿಗ್ಗೆ

  4. ಒಲವಿನ ಹಾಡು ಗೆಲುವಿನ ಭಾಷೆ ಒಂದಾಗಿ ಸುರಿವ ಪ್ರೇಮ ಧಾರೆ ಬದುಕು ಭರವಸೆಯ ಹೊಂಬಾಳೆ ಅತ್ಯಂತ ಆಪ್ತವಾದ ಅಭಿವ್ಯಕ್ತಿ

Leave a Reply

Back To Top