ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಾತು ಆರಂಭಿಸಿದಾಗಿನಿಂದ ತೊದಲು ನುಡಿಗಳಿಂದ ಎಲ್ಲರ ಮನಗೆದ್ದು ಮುಂದೆ ಚಿನಕುರುಳಿ,ಮಾತಿನ ಮಲ್ಲಿ ಎಂದೇ ಕರೆಯುತ್ತಾ ಇದ್ದ ಎಲ್ಲರೂ ಅವಳ ನಿಜವಾದ ಹೆಸರನ್ನೇ ಮರೆತು ಬಿಟ್ಟಿದ್ದರು

ಅವಳ ಮಾತು ಕೇಳಿ ಖುಷಿ ಪಡ್ತಾ ಇದ್ದ ತಾತ ಕೆಲವೊಮ್ಮೆ ಪುಟ್ಟಿ ಎಷ್ಟೊಂದು ಮಾತು ಆಡ್ತೀಯಾ ತಾಯೇ ಹಿಂದೆ ನಮ್ಮಲ್ಲಿ ಅಂಡೆ ಬಾಯಿ ಕಟ್ಟಬಹುದು ದೊಂಡೇ ಬಾಯಿ ಕಟ್ಟಕ್ಕಾಗಲ್ಲ ಅನ್ನೋ ಗಾದೆ ನಿನ್ನಂತವರನ್ನು ನೋಡಿಯೇ ಮಾಡಿರಬಹುದು ಅಂತ ಬೊಚ್ಚು ಬಾಯಿ ಅಗಲಿಸಿ ನಗುತಿದ್ದರು
ಹಾಗಂತ ಅವಳು ತನ್ನ ಮಾತಿನಿಂದ ಎಂದೂ ಯಾರನ್ನೂ ನೋಯಿಸಿದವಳಲ್ಲ ಸ್ವಾಭಿಮಾನಿ ಹುಡುಗಿ
ಗಂಭೀರ ವಾತಾವರಣದಲ್ಲೂ ತನ್ನ ಕೀಟಲೆ ತರ್ಲೆ ತಮಾಷೆಗಳಿಂದ ಪರಿಸ್ಥಿತಿ ಸಮಾಧಾನಕ್ಕೆ ತಂದು ಬಿಡುತ್ತಿದಳು

ಬಾಲ್ಯ ಕಳೆದು ತಾರುಣ್ಯ ಬಂದಾಗಲೂ ಅವಳ ಮಾತಿನಲ್ಲಿ ಬದಲಾವಣೆ ಆಗಿರಲಿಲ್ಲ ಎಲ್ಲರೂ ಇವಳಿಗೆ ಎಂತಾ ಹುಡುಗ ಸಿಗತನೋ ಅಂತ ಕಾಯ್ತಾ ಇದ್ರು
ಋಣಾನುಬಂಧ ಎನ್ನುವುದು ಎಲ್ಲಿ ಯಾವಾಗ ಯಾರನ್ನು ಒಂದುಗೂಡಿಸುತ್ತದೆ ಅಂತ ಯಾರಿಗೂ ತಿಳಿಯುವುದಿಲ್ಲ ಅಲ್ವಾ
ಹಾಗೇ ಇವಳಿಗೆ ಒಂದೊಳ್ಳೆ ಮನೆತನದ ಹುಡುಗನೊಂದಿಗೆ ಜಾತಕ ಕೂಡಿ ಬಂತು ಆದರೆ ಹುಡುಗ ಮೌನ ಸನ್ಯಾಸಿ
ಹತ್ತು ಮಾತಿಗೆ ಒಂದು ಉತ್ತರ
ಎಲ್ಲರೂ ಇವರ ಜೋಡಿ ಕೇಳಿ ಮನದಲ್ಲೇ ನಕ್ಕುಬಿಟ್ಟರು
ಕೆಲವರಂತೂ ಇವನ ಸಹವಾಸದಿಂದ ಇವಳು ಮಾತು ಮರೆಯದಿದ್ರೇ ಸಾಕಿತ್ತು ಅಂದ್ರೆ ಇನ್ನೂ ಕೆಲವರು ಇವಳ ಸಹವಾಸದಿಂದ ಅವನು ಮಾತು ಕಲಿತರೆ ಸಾಕಿತ್ತು ಅಂದ್ರು

ಕ್ರಮೇಣ…
ಅನುರಾಗದ ದಾಂಪತ್ಯ ಅವಳ ಸಾಂಗತ್ಯದಲ್ಲಿ ಅವನೂ ಮಾತು ಕಲಿತ ಅವನ ತಾಯಿಯಂತೂ ನಾನು ಹೆತ್ತಿದ್ದು ಮಾತ್ರ ಕಣಮ್ಮಾ ಅವನಿಗೆ ಮಾತು ಕಲಿಸಿದ ತಾಯಿ ನೀನೇ ಎಂದು ಹೊಗಳತೊಡಗಿದಳು
ಆದರೆ ಯಾಕೋ ಮಾತು ಮನೆಕೆಡಿಸಿತು ಅನ್ನೋ ತರ ಇವನ ಮಾತು ಹೆಚ್ಚಾಗತೊಡಗಿತು ಮಾತು ಅತಿಯಾಯ್ತು
ಶುದ್ಧ ಅಶುದ್ಧ ಮಾತುಗಳೂ ಬಳಕೆಯಾಗತೊಡಗಿದವು
ಇದನ್ನೇ ಕಾದು ಕುಳಿತ ಕೆಲವು ಸ್ನೇಹಿತರು ಇವನ ಬೆಂಗಾವಲಾದರು
ಹೆಚ್ಚಾಯಿತು ಸಹವಾಸ ಹುಟ್ಟಿಕೊಂಡಿತು ಹಾಳು ಹವ್ಯಾಸ
ಆರಂಭಿಸಿದ ಕುಡಿತ… ನಿತ್ಯವೂ ಅವಳಿಗೆ ಮನೆಯಲ್ಲಿ ತಪ್ಪುತ್ತಿರಲಿಲ್ಲ ಹೊಡೆತ ಬಡಿತ
ಈಗ ಅವನ ತಾಯಿ ಮಾತು ಕಲಿಸಿ ನನ್ನ ಮಗನನ್ನ ಹಾಳು ಮಾಡಿದೆಯಲ್ಲೇ ಮೂದೇವಿ ಅನ್ನಲಾರಂಭಿಸಿದಳು

ಆತ: ಇಂದು ಕು1ಡಿಯಲು ಹಣವಿಲ್ಲದೆ ಮಾಡಿದ್ದಾನೆ ಸಾಲ

ಎಲ್ಲಿಯೂ ಹುಟ್ಟದಿದ್ದಾಗ ಹಣದ ಮೂಲ ಹುಚ್ಚನಂತೆ ನಗುತ್ತಾನೆ ಕಿರುಚುತ್ತಾನೆ,ಬಡಬಡಿಸುತ್ತಾನೆ ಮಾತು ಆಡುತ್ತಲೇ ಇರುತ್ತಾನೆ

ಆಕೆ: ಮಾನಸಿಕವಾಗಿ ನೊಂದುಕೊಂಡಿದ್ದಾಳೆ ,ದೈಹಿಕವಾಗಿ ಸೋತಿದ್ದಾಳೆ , ಪಂಜರದ ಹಕ್ಕಿಯಂತೆ ಮಾತು ಮರೆತು ಮೌನವಾಗಿ ರೋಧಿಸುತ್ತಿದ್ದಾಳೆ….


About The Author

Leave a Reply

You cannot copy content of this page

Scroll to Top