ಕಾವ್ಯಸಂಗಾತಿ
ಚಂದ್ರು ಪಿ ಹಾಸನ್
‘ಜೀವಕ್ಕೆ ಜೀವ’
ಬಾಳೆಯ ಮರವೇ
ಬಾಗಿ ನಿಂತಿರುವೆಯಾ
ಸಾಸಿರ ಜೀವಕ್ಕೆ
ಜೀವ ನೀನಾದೆಯ
ಗುಂಪಾಗಿ ಸೊಂಪಾಗಿ
ಹಸಿರಾಗಿ ಬೆಳೆದೆಯಾ
ರುಚಿಯಾದ ಸವಿಯಾದ
ಫಲವ ನೀಡಿದೆಯಾ
ಊಟಕ್ಕೆ ನಿನ್ನ ಎಲೆಯು
ಪೂಜೆಗೆ ನಿನ್ನ ಫಲವು
ಪಲ್ಯಕ್ಕೆ ನಿನ್ನ ದಂಟು
ಹೂವಲ್ಲೂ ರುಚಿ ನಿನಗುಂಟು
ಒಣಗಿದರೆ ಹಗ್ಗವಾದೆ
ಹಬ್ಬದಲ್ಲೂ ಮೊದಲಾದೆ
ಸಗ್ಗದ ಸುಗ್ಗಿಯನ್ನು
ತಂದೆ ನೀ ರೈತನಿಗೆ
ಪಲ್ಲಕ್ಕಿಯ ಪಟ್ಟಕ್ಕೂ
ಸತ್ತವರ ಚಟ್ಟಕ್ಕೂ
ಔಷಧಿಗೂ ಮೊದಲಾಗಿ
ಜೀವಕ್ಕೆ ಜೀವವಾದೆ
ಉಸಿರಾದೆ ಮನಕುಲಕ್ಕೆ
ಕಸಿಯಲಾಗದ ರಸವಾದೆ
ಹಸಿರೆಲ್ಲಡೆ ಸೂಸುತ್ತ
ಹಸನಾಗಿ ಪಸರಿಸಿದೆ
ಚಂದ್ರು ಪಿ ಹಾಸನ್
Super sir
TQ u
Awesome
ಧನ್ಯವಾದಗಳು