ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
“ಸಖ ಜೊತೆಗಿರುವನು”
ಚಿಂತಿಸದಿರು ಗೆಳತಿ ಸಖ ಜೊತೆಗಿರುವನು
ಎದೆಯ ಪದಕೆ ದನಿಯಾದವನು
ಎಲೇಯ ಮರೆಯ ಗಿಳಿಯಾದವನು
ಚಿಂತಿಸದಿರು ಗೆಳತಿ
ಪರಿಶುದ್ಧ ಗೆಳೆತನಕೆ ಭಾಷ್ಯ ಬರೆದವನು
ಶುಭ್ರತೆಯ ಸಾಕ್ಷಿ ಬಿಳಿ ಹಾಳೆಯಂತಿಹನು
ಕಟ್ಟುಪಾಡುಗಳಿಲ್ಲದ ದೂರದೂರಿನವನು
ಮಾಂಗಲ್ಯಕಿಂತ ಮಧುರ ಸ್ನೇಹ ಮುಗಿಲೆಂದವನು
ಚಿಂತಿಸದಿರು ಗೆಳತಿ
ರಾಧೆಯ ಕೃಷ್ಣನಿವನು
ಮಧುರ ನುಡಿಯವನು
ಸ್ನೇಹದಿ ರಾಧೇಯನಿಗೂ ಸಾಟಿ ಇವನು
ಸಿಕ್ಕರೂ ಸಿಗದವನು
ಅಂಟಿಯೂ ಅಂಟದವನು
ಕಮಲದ ಮೇಲಿನ ಮುತ್ತು ಮಣಿ ಇವನು
ಚಿಂತಿಸದಿರು ಗೆಳತಿ
ಎದೆಯ ಬಡಿತ ಅರಿತವನು
ಸುಮದೊಳಿಹ ಮಕರಂದದಂತಿಹನು
ಬೆಳದಿಂಗಳೂರಿನವನು
ಬೆಳದಿಂಗಳಿಗೂ ಜೊತೆ ಇವನು
ಚಿಂತಿಸದಿರು ಗೆಳತಿ
ಸಖನಿರುವನು ಜೊತೆ
ಮಧುಮಾಲತಿ ರುದ್ರೇಶ್ ಬೇಲೂರು
ತುಂಬು ಧನ್ಯವಾದಗಳು ತಮಗೆ
ಪದ್ಯ ತುಂಬಾ ಚನ್ನಾಗಿದೆ