ಕಾವ್ಯ ಸಂಗಾತಿ
ಹನಮಂತ ಸೋಮನಕಟ್ಟಿ
‘ಮಹಾಮೌನಿ ನೀನು’
ನಿನ್ನ ಮೌನದ
ಮಾತುಗಳಲ್ಲಿ ಅದೆಷ್ಟೋ ಗಂಭಿರ ಚಿಂತನೆಯಿತ್ತು
ಒಂದನ್ನು ಬಿಟ್ಟುಕೊಡದೆ
ಎದೆಯಲ್ಲಿ ಬಚ್ಚಿಟ್ಟುಕೊಂಡದ್ದು
ಏತಕ್ಕೆ?
ಎಂಬುದು ಇನ್ನೂ ತಿಳಿಯಲಿಲ್ಲ.
ಸಾಗುವ ಮಹಾ ಯಾತ್ರೆಯಲ್ಲಿ
ಎಷ್ಟೊಂದು ವಿಶಾಲವಾದ ದುಃಖ ಸಾಗರ
ತೇಲಿ ಬರುವ ಅಲೆಗಳೆಲ್ಲವು
ಅಂಗಾಲೊಂದನ್ನು ಬಿಟ್ಟು ,
ತೋಯಿಸಿ ನೋಯಿಸಿ
ತೆರೆ ಮುಟ್ಟದೆ ದಂಡೆಗೆ ತಾಗಿ ನಿಂತುಕೊಂಡಿದ್ದವು
ಹಡಗು ಲಂಗುರ ಹಾಕಿ ನಿಂತಂತಲ್ಲ
ತಮ್ಮ ಭರವಸೆಯ ಮೇಲೆ
ಸಾಗುವ ಉತ್ಸವದುದ್ದಕ್ಕೂ
ಹರಡಿಕೊಂಡ ನಕ್ಷತ್ರಗಳನ್ನು
ಆಕಾಶದಿಂದ ಕತ್ತರಿಸಿ ತಂದದ್ದು
ಅಂತಿಮ ಕಾರ್ಯವೆಂದು ನಾವೆಂದೂ ತಿಳಿದುಕೊಂಡಿಲ್ಲ
ಅಲ್ಪ ಪ್ರಮಾಣದ ಕಾಣಿಕೆ ಅಷ್ಟೇ
ಇರುವಾಗ ಹೊರೆಯಾಗದಂತೆ
ಬದುಕಬಹುದು ಎಂಬುದನ್ನು ತೋರಿಸಿಕೊಟ್ಟು
ಮುಚ್ಚಿದ ಬಾಗಿಲು ತೆರೆದು ಹೊರ ಬಂದ ಮುತ್ತಿನಂತೆ
ನಿನ್ನ ಮಾತಿನ ಹೊಳಪೆಲ್ಲವೂ ಹಗಲ ರೂಪದಲ್ಲಿ
ನಮ್ಮ ಮುಂದಿನ ದಾರಿ ಯುದ್ದಕ್ಕೂ
ಹರಡಿದ್ದರ ಅಲ್ಪ ಕಾಣಿಕೆ ಅಷ್ಟೇ
ಭಾಷೆಯ ಬಾಂಧವ್ಯದ ನಡುವೆ
ಬೆಸೆದ ಸ್ನೇಹ ತಿಳಿದುಕೊಂಡವರು
ಜೊತೆಗಿದ್ದು ಸಂತೈಸುವುದ ಬಿಟ್ಟು ಅಷ್ಟೊಂದು ದೂರ ಉಳಿದದ್ದು
ನನಗಿನ್ನೂ ಪ್ರಶ್ನ…
ಹನಮಂತ ಸೋಮನಕಟ್ಟಿ