ಮಾಲಾ ಹೆಗಡೆ ಅವರ ಮಕ್ಕಳಪದ್ಯ-ಕಡಲು

ಹೋಗುವ ನಾವು ಕಡಲನು ಕಾಣಲು,
ಸೊಬಗಿನ ದೃಶ್ಯವ ಸವಿಯಲು.

ಮರಳನು ಕೂಡಿಸಿ ಮನೆಯ ಕಟ್ಟುವ,
ಕಪ್ಪೆಯ ಚಿಪ್ಪನು ಒಟ್ಟು ಮಾಡುವ.

ಅಲೆಗಳ ಜೊತೆಯಲಿ ಆಟ ಆಡುತ,
ಕುಣಿದು ನಲಿಯುವ ಬೀಳುತ ಏಳುತ.

ಜಲಚರವಿಹುದು ಕಡಲಿನಾಳದಲಿ,
ಮುತ್ತಡಗಿಹುದು ಒಳ ಚಿಪ್ಪಿನಲಿ.

ದೃಷ್ಟಿ ಚಾಚಾಲು ಸುತ್ತಲೂ ನೀರೇ
ಉಪ್ಪು ಲವಣವೂ ಅದರಲಿ ಸೇರಿರೆ.

ಬಾನಲಿ ಸೂರ್ಯನು ಮುಳುಗುವ ಹೊತ್ತು,
ಜಲದ ರಂಗದು ಮನಸೆಳೆದಿತ್ತು.

ಅಲೆ ಅಳಿಸಿತ್ತು ಉಸುಕಲಿ ಬರೆದೆಸರ,
ತೀರದಿ ಕೂತು ನೋಡಲು ಬಲು ಸುಂದರ.


Leave a Reply

Back To Top