ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ಮನಶಾಂತಿ
ಹತ್ತೂರು ಸುತ್ತಿದರು ಬೆಟ್ಟವ ಹತ್ತಿದರು
ಗತ್ತಲ್ಲಿ ನಡೆದರೂ ಗುಟ್ಟಾಗಿ ಉಳಿದರು
ಹೆತ್ತಮ್ಮನ ಮರೆತೆ ಎಂದರೆ
ಮನಶಾಂತಿ ಸಿಗದು ತಮ್ಮ
ನಿನಗೆ ಮನಶಾಂತಿ ಸಿಗದು ತಮ್ಮ
ಭವದ ಮೇಲಿನ ನಾಟ್ಯ ರಂಗದಲ್ಲಿ
ಎಲ್ಲವೂ ನಶ್ವರ ನಶ್ವರ ನಶ್ವರ
ಬೆಳಕು ಹರಿಯುವಲ್ಲಿ ನೆರಳ ಬದುಕಿನಲ್ಲಿ
ದೃಷ್ಟಿಕೋನ ಇರಲಿ ನೇರನೇರ
ನಗುವನ್ನು ಬರಿಸುವ ಮಲ್ಲಿಗೆಯಂತೆ
ಇರಬೇಕು ಮನವು ಹೂವಿನಂತೆ
ತೆಂಗಿನ ಗರಿಗಳು ಬಾನನ್ನೇ ನೋಡುತ್ತಾ ಬಾಗುವಂತೆ
ಬದುಕು ಇರಬೇಕು ಸ್ವಚ್ಛಂದದಂತೆ
ಬೀಸುವ ಬೀಸಣಿಕೆ ಗಾಳಿಯಂತೆ
ಕಷ್ಟವ ಕಷ್ಟದಿ ನುಂಗುತ್ತಾವ
ಗಾಳಿ ನೀರಿನಲ್ಲಿ ತೇಲಿ ಹಾರುವಲ್ಲಿ
ಬದುಕು ಮುಗಿಯುತಾವ ಉಸಿರು ನಿಲ್ಲುತಾವ
ಮನ್ಸೂರ್ ಮೂಲ್ಕಿ