ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಮೊದಲ ಭೇಟಿಯಲ್ಲೇ
ಹೊಳೆಯಿತೊಂದು ಕಾವ್ಯ,
ದಾಖಲಿಸಲಾಗದೆ,
ಹಾಡುತಿದೆ ಹೃದಯ.
ತಂಪಡರಿದ ಮೇಘ
ಹನಿಯ ಸುರಿಸುತಿದೆ
ಅವನೊಟ್ಟಿಗೆ ಕೊಡೆ
ಚಳೀಲೂ ಬೆಚ್ಚಗಿದೆ.
ಮ್ಲಾನ ಮುಖದ ಮೇಲೆ
ತುಂತುರು ಮಳೆ ಹನಿ
ಏನನ್ನೂ ನೆನಪಿಸಿ
ದುಗುಡ ಕಳೆಯಿತು.
ತದೇಕ ದೃಷ್ಟಿಯಲಿ
ಪದವ ಕಟ್ಟಿದೆವು,
ಜನರ ಮಾತಿನಲಿ
ಇಬ್ಬರೂ ಹಾಡಾದೆವು.
ಕೊಂಚ ರವಿಕಿರಣ
ಹನಿ ನೆನೆವಷ್ಟಿಲ್ಲ,
ಆ ಹಾ ಮನಮೋಹಕ
ನೋಡು ಕಾಮನಬಿಲ್ಲು.
ಆ ಹಾ ಮಳ್ಯಾಗ ನಾವೂ
ಮಕ್ಕಳಾಗಿ ಬಿಡೋಣ,
ಸಕ್ಕಾ- ಸರಗಿ ಸುತ್ತಿ
ಕಳ್ಳೆ-ಮಳ್ಳೆ ಆಡೋಣ
————————–
ವ್ಯಾಸ ಜೋಶಿ.