ಕಾವ್ಯಸಂಗಾತಿ
ಶಾಲಿನಿ ಕೆಮ್ಮಣ್ಣು ಅವರಕವಿತೆ-ನರ -ಮರ
ನರನಿಗಿದೆ ನರ
ನರಳುವ ನೋವಲಿ ತರತರ
ಮರಕ್ಕಿಲ್ಲ ನರ
ತಂತು ಉಲ್ಲಾಸದ ಸಡಗರ
ಜನರಿಗೆ ಬರುವುದು ಜ್ವರ
ಬಳಲುವರು ತತ್ತರ
ಮರಕ್ಕೆ ಬರದು ಜ್ವರ
ನೀಡುವುದು ಆರೋಗ್ಯದ ಉಸಿರ
ಜನ ಜೀವನ ನಶ್ವರ
ವನದ ಸಿರಿ ಅಪಾರ
ಮರ ಭೂಮಿಗೆ ಆಧಾರ
ನರ ಭೂಮಿಗೆ ಭಾರ
ನರನಾಗುವ ಒಮ್ಮೊಮ್ಮೆ ವಾನರ
ಮಾಡುವ ವ್ಯಭಿಚಾರ ತೀರಾ
ವಿನಾಶದ ಅಂಚಿನಲ್ಲಿಹುದು ಜನಸಾಗರ
ಎಡೆಯಿಲ್ಲದೆ ನಡೆಸುವರು ಕ್ರೂರ ಪ್ರಹಾರ
ವನಸಿರಿಯ ಅಳಿಸುವ ಜನರ ಹಸಿವೆಗುಂಟೆ ಉತ್ತರ?
ಶಾಲಿನಿ ಕೆಮ್ಮಣ್ಣು