ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-‘ಅವರು ಹೋದ ಹಾದಿಯಲ್ಲಿ

ಅವರು ಹೋದ ಹಾದಿಯಲ್ಲಿ
ನಾವು ಹೋಗಲಿಲ್ಲ
ಸತ್ಯ ಸಮತೆ ಶಾಂತಿ ಪ್ರೀತಿ
ಅವರ ವಿಶ್ವ ಪ್ರೇಮದ ಮಂತ್ರವು.

ಕಳಚಿ ಲಿಂಗವ ಮರೆತು ಜಂಗಮ
ಕಾವಿ ಮಠಗಳ ಸಂಗಮ
ಬಸವ ಮುದ್ರೆ ಮೆರೆಸಿ ನಾವು
ದುಡ್ಡು ಮಾಡುವ ತಂತ್ರವು.

ಶ್ರಮವೆ ಪೂಜೆ ಇಲ್ಲ ಪ್ರಾರ್ಥನೆ
ಹಂಚಿ ಬಾಳುವ ಯೋಗವು
ಶರಣ ಹಾದಿ ಕಲ್ಲು ಮುಳ್ಳು
ವಚನ ನಡೆಯ ಊರುಗೋಲು

ಅಕ್ಕ ಅಲ್ಲಮ ದಾಸ ದುಗ್ಗಳೆ
ವಿಶ್ವ ಕ್ರಾಂತಿಯ ಮದ್ದಳೆ
ಜಗಕೆ ಬೇಕು ಬುದ್ಧ ಬಸವರು
ನ್ಯಾಯ ಪಥವ ಹಿಡಿಯಲು

ಅವರ ಸಾವು ನೋವು ನೆನಪು
ಯುದ್ಧ ಗೆದ್ಧ ಯೋಧರು
ತಾವು ಸತ್ತು ವಚನ ಕೊಟ್ಟರು
ಸೂರ್ಯ ಚಂದ್ರರ ಸಾಕ್ಷಿಯು


4 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-‘ಅವರು ಹೋದ ಹಾದಿಯಲ್ಲಿ

  1. ಸತ್ಯ ಸಮತೆ ಶಾಂತಿ ಪ್ರೀತಿ
    ಭಾವ ತುಂಬಿದ ಕವನ
    ಸೂರ್ಯ ಚಂದ್ರರೆ ಸಾಕ್ಷಿ

  2. ಮಾರ್ಮಿಕ ವಿಚಾರಗಳಿರುವ ಕವನ ಸರ್

    ಡಾ ಗೀತಾ ಡಿಗ್ಗೆ

  3. ಜಗಕೆ ಬೇಕು ಬುದ್ಧ ಬಸವರು
    ನ್ಯಾಯ ಪಥವ ಹಿಡಿಯಲು
    ಸತ್ಯಯುತವಾದ ಕಳಕಳಿಯ ನುಡಿಗಳು

    ಸುಶಿ

Leave a Reply

Back To Top