ಪಿ.ವೆಂಕಟಾಚಲಯ್ಯ ಅವರ ಕವಿತೆ-ನರಿ ಮತ್ತು ಹುಳಿ ದ್ರಾಕ್ಷಿ.

ಕಾಡಲಿ ಒಂದು ನರಿಯಿತ್ತು .
ಕಾಡು-ಮೇಡು ಅಲೆಯುತಿತ್ತು.
ಅಲೆಯುತಲೆಯುತ, ಬಯಲಿಗೆ ಬಂತು.
ಏನೂ ತಿನ್ನದೆ ಹಸಿದಿತ್ತು.

ದೂರದಿ ಕಂಡಿತು, ದ್ರಾಕ್ಷಿಯ ತೋ ಟ .
ರಸಬರಿತ, ಹಣ್ಣಿನ ತೋಟ.
ನರಿಯ ಬಾಯಲಿ ನೀರೂರಿತ್ತು.
ಹಣ್ಣನು ಕೀಳಲು ಧಾವಿಸಿತು.

ಎತ್ತರದಲ್ಲಿದೆ, ದ್ರಾಕ್ಷಿಯ ಗೊಂಚಲು.
ಎಟುಕದು ನರಿಗೆ, ಗೊಂಚಲ ಕೀಳ ಲು.
ನೆಗೆಯುತ ಹಣ್ಣನು, ಕೀಳಲು ಯ ತ್ನಿ ಸಿತು.
ಯತ್ನ ಮರುಯತ್ನವು, ನಿಷ್ಫಲವಾ ಯ್ತು.

ನೆಗೆಯುತ ನೆಗೆಯುತ, ನರಿ ಸುಸ್ತಾ ಯ್ತು.
ಮಾಡಿದ ಯತ್ನವು, ಫಲಿಸದೆ ಹೋ ಯ್ತು.
“ಛಿ ದ್ರಾಕ್ಷಿ ಹುಳಿ” ಎಂತೆಂದಿತು ನರಿ.
ಹಿಡಿಯಿತು ತಾನು, ಬಂದ ದಾರಿ.

ಹುಳಿಯಲ್ಲವೊ ದ್ರಾಕ್ಷಿ , ಸಿಹಿ ಒಗರು.
ಈ ಸತ್ಯವ ನರಿಗೆ, ಹೇಳುವರಾರು?
ಬಯಸಿದ್ದನ್ನು, ಪಡೆಯಲಾಗದಿರ ಲು,
ಮಿಥ್ಯಾರೋಪವ, ಮಾಡಿತು ನರಿ ಯು.

Leave a Reply

Back To Top