ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ವಿರಹ

ಸಂಚರಿಸಿ ಹೋಗುತ್ತಿದೆ
ಮನದೊಳಗೆ ನೆನಪೊಂದು
ಎಡೆ ಬಿಡದೆ ಸುರಿವ
ಮಳೆಯ ಹನಿಯಂತೆ
ಮೋಡ ತಬ್ಬಿದ ಆಗಸದಂತೆ
ಕಾಡುತಿದೆ ಇಂದು
ಹೆಜ್ಜೆ ಹೆಜ್ಜೆಗೂ ಏನೋ ಕೆರೆತ
ಎದೆಯೊಳಗಡೆ ಭಾವನೆಗಳ
ಮಿಡಿತಗಳ ಬೋರ್ಗರೆತ
ಹೇಳಲಾಗದ ಅವ್ಯಕ್ತ ತುಡಿತ
ಮಾತು ಮಾತಿಗೆ ಕಾಯುತ್ತಿದ್ದೆ
ನಿರರ್ಗಳವಾಗಿ ಮಾತನಾಡುತ್ತಿದ್ದೆ
ರೋಮಾಂಚನವ ನೀಡುತ್ತಿದ್ದೆ
ಅರೆಕ್ಷಣವೂ ಬಿಡದಂತೆ
ಜೊತೆಯಾಗುತ್ತಿದ್ದೆ
ಪ್ರತಿಕ್ಷಣವು ಮನಸಿಗೆ
ಖುಷಿಯ ನೀಡುತ್ತಿದ್ದೆ
ಜಗದೆಲ್ಲ ಸಂತಸವ ನನಗಾಗಿ
ನೀ ಹೊತ್ತು ತರುತ್ತಿದ್ದೆ
ಮರೆಯದು ಗೆಳೆಯ ಮನ
ಅರೆಗಳಿಗೆಯು ನಿನ್ನ
ನೀನೀಗ ಅಲ್ಲಿ
ವಿದೇಶದಲ್ಲಿ ಪರದೇಶಿ
ನಾನೀಗ ಇಲ್ಲಿ ವಿರಹ ನಿವಾಸಿ
ಆದಷ್ಟೂ ಬೇಗ ಬಂದು ಬಿಡು
ನೀ ಸ್ವದೇಶಿ
ನಿನಗಾಗಿ ಕಾಯುವೆನು
ನಾ ಹೂವ ಹಾಸಿ
ಬಂದು ತಣಿಸಿ ಬಿಡು
ನನ್ನೊಳಗಿನ ವಿರಹ ವೇದನೆಯ
ದೂರ ಓಡಿಸಿಬಿಡು


2 thoughts on “ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ವಿರಹ

  1. ಬಹಳ ಚಂದದ ಕವಿತೆ
    “ನೀ ಸ್ವದೇಶಿ” ನೈಸ್

    ಶುಭಲಕ್ಷ್ಮಿ ನಾಯಕ

  2. ಸಂಚರಿಸಿ ಹೋಗುತ್ತಿದೆ ಮನದ ನೆನಪೊಂದು ಈ ಸಾಲು ಆಪ್ತವಾಯಿತು. ಈ ಕವನದ ಸಾಲುಗಳಲ್ಲಿ ಸಹಜ ಜೀವಂತಿಕೆ ಇದೆ. ಮಣ್ಣಿನ ಕರೆಯಿದೆ. ಚೆನ್ನಾಗಿದೆ ಕವಿತೆ

    ನಾಗರಾಜ ಬಿ.ನಾಯ್ಕ
    ಹುಬ್ಬಣಗೇರಿ.

Leave a Reply

Back To Top