ಹನಮಂತ ಸೋಮನಕಟ್ಟಿ ಅವರ ಶಾಯರಿಗಳು

ನಿನ್ನ ಪ್ರೀತಿಯ ಮಾತು ಕೇಳಿ
ನನಗಂತೂ ತುಂಬಾ ಖುಷಿ ಬಾಳ ಆಗಿತ್ತು
ನಿನ್ನ ಪ್ರೀತಿ ಮಾತಿನ್ಯಾಗನ ಈ ರೀತಿ
ಮಸಲತ್ತು ಮಾಡ್ತಿಯನ್ನೋದ ಮರತು ಹೋಗಿತ್ತು

ಕಂಬಕ ನಿಂತು ಮೂಗಿನ ಹೊಳ್ಳಿ ಹೊಳಿಸಿ
ನನ್ನ ಕಡೆ ಯಾಕ ತುಟಿ ಕಡದ ನಗಿ ಕಳಿಸ್ತೀದಿ
ನಾನು ನಿನ್ನ ನಗಿಗೆ ಪತ್ರ ಕಳಿಸಬೇಕ ಅನ್ನುದರಾಗ
ನಿನ್ನ ಪತ್ತಾ ಹೇಳದ ಯಾಕ ಓಡಿ ಹೊಕ್ಕೀದಿ

ನಿನ್ನ ಹುಬ್ಬು ಆಡು ಆಟ ನೋಡಿಂದ
ನನಗಂತೂ ಪ್ರತಿ ದಿನ ಹಬ್ಬನ ಆಗೈತಿ
ಅವು ಎರಡು ನಿನ್ನ ಹತ್ರ ಇರಲಾರದ
ನನ್ನ ಹುಬ್ಬ ತಬ್ಬಿಕೊಂಡು ಮುತ್ತು ಕೊಡತಿರತೈತಿ

ನಿನ್ನ ಲಿಪ್ ಸ್ಟಿಕ್ ಹಚ್ಚಿದ ತುಟಿ ನೋಡಿ
ನನಗಂತೂ ಪೂರ್ತಿ ನಿಶೆ ಏರಿ ಹೋಗೈತಿ
ಹೊರಗ ಎದ್ದು ಹೋಗೂದು ಆಗಲಾರದಂಗ
ನಿನ್ನ ತುಟಿನ ಮತ್ತ ಒತ್ತಿ ಒತ್ತಿ ನಿಶೆ ಮಾಡಾಕ ಹತೈತಿ

ಎಡಗೈ ಬಲಗೈ ಕೈಯಾಗಿನ ಬಳ್ಳ ಅಂತೂ
ನಿನ್ನ ಹಾವಿನ ಜಡಿ ತೋರಿಸಿ ಹೆದರಿಸತೈತಿ
ನಿನ್ನ ಹಾವಿನ ಜಡಿಗಂತೂ ನಾ ಹೆದರೋದಿಲ್ಲ
ಅಂಜನ ಹಚ್ಚಿ ಬುಟ್ಟಿಗೆ ಬೀಳಸೋದು ಗೊತೈತಿ

ನೀ ಬಾಗಿಲ ಕಡೆ ಬಗ್ಗಿ ನೋಡುವಾಗ
ನಿನ್ನ ಮುಂಗುರುಳು ಹಾಂಗ್ಯಾಕ ಮಾಡತೈತಿ
ನಿನ್ನ ಸಂಗ ಹರಕೊಂಡು ದೂರ ಆಗಿವನ್ನೋದು
ಅದಕ್ಕ ಗೊತ್ತಿದ್ರೂ ನಂಗ ಬಾ ಯಾಕ ಅಂತೈತಿ

ನಿನ್ನ ಹನಿಮ್ಯಾಗಿನ ಹಚ್ಚಿ ಬೊಟ್ಟು
ಸೀದಾ ನನ್ನ ಕಡೆನ ಬೊಟ್ಟು ಮಾಡತೈತಿ
ಒಮ್ಮೆ ನನ್ನ ಕೂಡ ಕುಂಕುಮ ಹಚಿಗೊಂಡದ್ದು
ಗೊತ್ತಿದ್ದೂ ಅದು ಬಿಟ್ಟರ ಯಾಕ ಹೋಕೈತಿ
—————————-

Leave a Reply

Back To Top