ಮಾಳೇಟಿರ ಸೀತಮ್ಮ ವಿವೇಕ್ ಅವರಕವಿತೆ-ಗೊರೂರು ರಾಮಸ್ವಾಮಿ ಅಯ್ಯಂಗಾರರು.

ಗೊರೂರಿನ ಗರಿಮೆ ರಾಮಸ್ವಾಮಿ ಅಯ್ಯಂಗಾರ್ ॥
ಸ್ವತಂತ್ರ ಕಿಚ್ಚನಚ್ಚಿದ್ದ ಕರುನಾಡಿನ ಸಾಹುಕಾರ್॥

ಗೌರವದಿ ಗಾಂಧೀಜಿಗೆ  ತಲೆಬಾಗುತ॥
ಲೇಖನಿಯಿಂದಲೆ ಮಾತಾಡುತ॥
ಊರಿನ ಘನತೆ ಕಾಪಾಡುತ॥
ಹೋರಾಟಕೆ ಧುಮುಕಿದ ಇವರು
ಭಾರತ ಮಾತೆ ಪುತ್ರ॥


ಪ್ರಬಂಧ ಕವನ ಲೇಖನ ಮೇಲಣ ಹಿಡಿತ॥
ಕಥೆ ಕಾದಂಬರಿ ಸಿನಿಮಾ ಮಾಡಿಸಿತ್ತ॥
ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಧೀಮಂತ॥
ಪದವಿ, ಪತ್ರಿಕೋದ್ಯಮ ಆರಿಸಿಕೊಂಡಿದ್ದ ಸುಮಿತ್ರ॥

ಅಸಹಕಾರ ಚಳುವಳಿಯಲಿ ನಿರತ॥
ಗ್ರಾಮೋದ್ಧಾರಕೆ ಒತ್ತು ನೀಡುತ॥
ಕರ್ನಾಟಕ ಏಕೀಕರಣದಿ ಬೆರೆಯುತ॥
ದೇಶದ ಸಮಗ್ರ ಏಳಿಗೆ ಬಯಸಿದ್ದ ಇವರು ಹಾಸನಾಂಬೆಯ ಸುಪುತ್ರ॥

——————————————–

Leave a Reply

Back To Top