ಸಾಕ್ಷಿ ಶ್ರೀಕಾಂತ ತಿಕೋಟಿಕರ ಅವರ ಕವಿತೆ-ಕೃಷ್ಣ.

ಕೈಯಲ್ಲಿ ಸುದರ್ಶನ ಚಕ್ರ ದಂಥ ಆಯುಧ
ಆದರೂ ಕೊಳಲನ್ನು ಹಿಡಿದು ನಿಂತವನ್ಯಾರದರೂ
ಇದ್ದರೆ ಅವನು ಕೃಷ್ಣನೇ ಆಗಿದ್ದ

ಸಾವಿರಸಸೈನ್ಯದ ಬಲವಿದ್ದರೂ ಯುದ್ಧದಲ್ಲಿ
ಶಸ್ತ್ರವನ್ನು ಬಿಟ್ಟು ಸಾರಥಿಯಾಗುವನೆಂದರೇ
ಅವನು ಕೃಷ್ಣನೇ ಆಗಿದ್ದ

ಅರಮನೆ ಸಕಲ ಸಂಪತ್ತು ವೈಭೋಗದಲ್ಲಿ
ಸುಧಾಮನಂತಹ ಗೆಳೆಯನನ್ನು ಹೊಂದಿದ್ದರೇ
ಅವನು ಕೃಷ್ಣನೇ ಆಗಿದ್ದ.

ಮೃತ್ಯುತನ್ನ ಕಾಲ್ಕೆಳಗೆ ಹಾವಾಗಿ ನಿಂತಾಗ
ನೃತ್ಯವ ಮಾಡಿ ನಗುತನಿಂತವನು ಯಾರಿದ್ದರೇ
ಅವನು ಕೃಷ್ಣನೇ ಆಗಿದ್ದ.

ಒಂದೇ ತಪ್ಪಿಗೆ ತಲೆ ಉರಳಿಸುವ ತಾಕತ್ತು
ನೂರುತಪ್ಪು ಎಣಿಸುತ ತಾಳ್ಮೆಯಲಿ ಕಳೆದವನು
ಅವನು ಕೃಷ್ಣನೇ ಆಗಿದ್ದ

ದ್ವೇಷಿಸುವ ಸಾವಿರ ದಾರಿಯ ಜಗದಲಿ
ಪ್ರೀತಿಸುತ ನಿಲ್ಲು ಎಂದು ಹೇಳಿದವನ್ಯಾರೆಂದರೇ
ಅವನು ಕೃಷ್ಣನೇ ಆಗಿದ್ದ.


4 thoughts on “ಸಾಕ್ಷಿ ಶ್ರೀಕಾಂತ ತಿಕೋಟಿಕರ ಅವರ ಕವಿತೆ-ಕೃಷ್ಣ.

  1. ಶ್ರೀ ಕೃಷ್ಣಂ ವಂದೇ ಜಗದ್ಗುರುಂ
    (ಆಪ್ಯಾಯಮಾನವಾದ ಭಕ್ತಿಯ ಲಹರಿ)

Leave a Reply

Back To Top