ಸವಿತಾ ದೇಶಮುಖ ಅವರ ಕವಿತೆ-‘ಬಾಡದಿರಲಿ ಚಿಗುರು’

ಬಾಡದಿರಲಿ ಕಂಗಳ ಹೊಳಪು,
ಬಾಡದಿರಲಿ ಮೊಗದ ಅಂದವು,
ಸಂಸ್ಕೃತಿಯ ಮೆರಗು
ಬಾಡದಿರಲಿ ಮನದಮಲ್ಲಿಗೆಯು,
ಆಶಾ ಭಾವದ- ಸದ್ಭಾವನೆಯು.

ಭುವನ ಗೆಲ್ಲುವ ಹುಮ್ಮಸ್ಸು
ಸುಖ ಸಂಸಾರದ ಸಂತಸು,
ಹೆಂಡರ ಮಕ್ಕಳ ಒಡನಾಟದ ಹಾಸು- ಬೀಸುಗಳ ಹೊಳಪು
ಗೆಲ್ಲು ಮೈಮರೆತು ಓಲಾಡುವ
ಮನಸ್ಸು ,ಹಮ್ಮು- ಬಿಮ್ಮು
ತೊರೆದ ಸಂಸಾರ ತೇರು..

ಎರಡು ದಿನದ ಸಂತೆ-ಬಾಳು
ಇದ್ದು ಜೈಸಬೇಕು ಉರ್ವಿಯ,
ಕಾಯಕದಿ ಹಿರಿಮೆಯತೋರುತ
ನ್ಯಾಯನಿಷ್ಠರತೆಯ ಜೀವನದಿ
ಮೇಲು ಕೀಳುಗಳೆಂಬ
ಕೊಳೆಯ ತೊಳೆದು
ಚಿಗುರಿ ಗಿಡವಾಗಿ- ಮರವಾಗಿ
ಮನುಜರಿಗೆ ನೆರಳಾಗಿ-
ಫಲವಿತ್ತು ನಡೆ ಮುನ್ನ
ಮುಕ್ತಿಯ ಮುಕುರದತ್ತ….
ಮುದುರದಿರು
ಚಿಗುರೋಡೆವ ಮುನ್ನ
ಸ್ಥೈರ್ಯದಿ ನಡೆ ಮುನ್ನ ಕವಲೋಡೆದು…
ಸತ್ಯದ ನಿಜವನರ್ರಿ..


One thought on “ಸವಿತಾ ದೇಶಮುಖ ಅವರ ಕವಿತೆ-‘ಬಾಡದಿರಲಿ ಚಿಗುರು’

Leave a Reply

Back To Top