ಡಾ.ಡೋ.ನಾ.ವೆಂಕಟೇಶ ಕವಿತೆ-‘ನಾವ್ ಅನಿಕೇತನರು’

ಅನಿಕೇತನರು ನಾವು
ಮಹಾ ಪ್ರಸಾದಿಕರು

ತಗ್ಗು ದಿಣ್ಣೆಗಳ ಕ್ರಮಿಸಿ
ಓರೆ ಕೋರೆಗಳ ಕ್ಷಯಿಸಿ
ಮನುಷ್ಯನಾಗೇ ಬದುಕಿ
ಬದುಕಿನುದ್ದಕ್ಕೂ ನಗುತ್ತ
ಸಾಗಿದ್ದೇವೆ ಇಂದಿಲ್ಲಿ.

ತಂದೆತಾಯಿ ಮಡದಿ ಮಕ್ಕಳನ್ನು
ಭವ ಸಾಗರದಲ್ಲಿ ಮೇಲಾಟವಾಡಿಸಿ
ಸಾರ್ಥಕ್ಯ ಕಂಡಿದ್ದೇವೆ
ಸ್ನೇಹಿತರೊಡಗೂಡಿ ಹಾಡಲು ಕಲಿತು ನಲಿಯುತ್ತಿದ್ದೇವೆ

ಬರೆ ಬರೆ ನಗುತ್ತಿದ್ದೇವೆ
ನಾವ್ ಅನಿಕೇತನರು
ನಿಕೇತನವೇ ಇಲ್ಲದವರು

ಎಂದೇ ಹೋಗುವ ದಿನವೆಂದು
ಕೇಳುತ್ತಿದ್ದೇವೆ ಖುಷಿಯಿಂದ
ಹೇಳುತ್ತ-
‘ಅನಾಯಾಸೇನ ಮರಣಂ
ದೇಹಿಮೇ ಪರಮೇಶ್ವರ ‘ ಬೇಡುತ್ತ!
ಮತ್ತೊಮ್ಮೆ ನಲಿಯುತ್ತ


4 thoughts on “ಡಾ.ಡೋ.ನಾ.ವೆಂಕಟೇಶ ಕವಿತೆ-‘ನಾವ್ ಅನಿಕೇತನರು’

Leave a Reply

Back To Top