ಕಾವ್ಯ ಸಂಗಾತಿ
ಮಾಲಾ ಹೆಗಡೆ
ಗಜಲ್
ಮೂಕ ಮಾತಿದು ಬಿಕ್ಕುತ ಕೂತಿದೆ
ಅರಿವರಿಲ್ಲಿ ಯಾರು
ಮೌನದ ಮನೆಯೊಳು ಘರ್ಷಣೆ ನಡೆದಿದೆ
ಅರಿವರಿಲ್ಲಿ ಯಾರು
ಭಾವವು ಒಂಟಿಯ ಓಟವ ನಿಲಿಸಿದೆ
ಬಾಳಿನ ಬಯಲೊಳಗೆ
ಪೂರ್ವದ ಶಾಪಕೆ ಪ್ರಸ್ತುತ ಮರುಗಿದೆ
ಅರಿವರಿಲ್ಲಿ ಯಾರು
ಆರ್ತವ ಆಲಿಸೋ ಕರ್ಣಗಳಿಲ್ಲ
ಬರೀ ಅರ್ಥಕೆ ಬೆಲೆಯಿಲ್ಲಿ
ಬಯಕೆಯ ಬಂಡಿಯ ಗಾಲಿಯು ಸವೆದಿದೆ
ಅರಿವರಿಲ್ಲಿ ಯಾರು
ಪಾತ್ರವು ಇರದೇ ನಾಟಕ ಮಾಡಿವೆ
ಬದುಕಿನ ಕ್ಷಣಗಳೀಗ
ಭರವಸೆ ನಾವೆಗೆ ಬಿರುಕದು
ಬಿಟ್ಟಿದೆ ಅರಿವರಿಲ್ಲಿ ಯಾರು
ನಗಿಸುವ ನಯನದ ನೆಮ್ಮದಿ ಕುಂದಿವೆ
ಸುಡುತಿರೋ ಬತ್ತಿಯಂತೆ
ಒಲವಿನ ‘ಮಾಲೆ’ಯು ಮನದಲೇ
ಮುದುಡಿದೆ ಅರಿವರಿಲ್ಲಿ ಯಾರು
ಮಾಲಾ ಹೆಗಡೆ.
——————————————
ಮಾಲಾ ಹೆಗಡೆ.