ಪರಮೇಶ್ವರಪ್ಪ ಕುದರಿ ಅವರ ಶಾಯರಿಗಳು

ಇತ್ತಿತ್ತಲಾಗ ನಂಗ ಬಾಳ ಚೊಲೋ
ನಿದ್ದಿ ಬರಾಕ ಹತ್ತೇತಿ, ಬಾಳ ಖುಷಿ ಆಗೇತಿ!
ಆದ್ರ ಏನ್ಮಾಡ್ಲಿ ಕಣ್ಣ ತಗದ್ರ ಸಾಕು
ಮತ್ತ ಅಕೀ ನೆನಪ ಕಾಡತೈತಿ
ಜೀವನ ಬಾಳ ಬ್ಯಾಸರನ್ನಸತೈತಿ!!

ದೇವ್ರು ಕೊಟ್ಟಿದ್ದನ್ನ ಖುಷಿಯಿಂದ ತಗೋಬೇಕು
ಯಾಕಂದ್ರ, ದೇವ್ರು ನಮಗೇನು
ಇಷ್ಟಾನೋವಅದನ್ನ ಕೊಡಲ್ಲ!
ನಮಗ ಯಾವದು ಯೋಗ್ಯಾನೋ
ಅದನ್ನ ಕೊಟ್ಟಿರತಾನ!!

ಪ್ರೀತಿಯಲ್ಲಿ ಕೆಲವ್ರ ಮನಸ
ಒಡದ ಹೋಗತೈತಿ!
ಹೆಂಗ ಬದಕಬೇಕನ್ನೂದು
ಗುಲಾಬಿ ನೋಡಿ ಕಲೀಬೇಕು!!
ತಾನು ಮುರಕೊಂಡ್ರೂ
ಎರಡ ಮನಸಗಳನ್ನ ಒಂದ ಮಾಡತೈತಿ!!!

ಆಕಿ ಸಹವಾಸ ಮಾಡಿ ಆಕಿ ಮ್ಯಾಲೆ ಮನಸಾಗೇತಿ
ಆಕಿ ಕೂಡ ಮಾತಾಡೂದು ಚಟ ಆಗಿ ಹೋಗೇತಿ!
ಒಂದಕ್ಷಣ ಆಕಿ ಕಾಣಲಿಲ್ಲಾಂದ್ರ ಜೀವ ಚಡಪಡಸತೈತಿ
ಮೊದ್ಲ ಮೊದ್ಲ ಸ್ನೇಹ ಆಗಿದ್ದು ಈಗೀಗ ಪ್ರೀತಿ ಆಗೇತಿ!!

ನಿನ್ನ ನೆನಪನ್ನೂದು ಬಾಳ ನಾಚಿಗ್ಗೇಡೈತಿ
ಬ್ಯಾಡ ಬ್ಯಾಡ ಅಂದ್ರೂ ದಿನಾ ಬರತೈತಿ!
ಹಿಡದ ಕೇಳಿದ್ರ ಹೇಳತೈತಿ, ಬ್ಯಾರೆ ಕಡೆ
ಹೋದ್ರ ನನಗ ಮರ್ಯಾದಿ ಎಲ್ಲೈತಿ!!


2 thoughts on “ಪರಮೇಶ್ವರಪ್ಪ ಕುದರಿ ಅವರ ಶಾಯರಿಗಳು

  1. ಕುದರಿ ಅವರ ಶಾಯರಿಗಳನ್ನ ಓದಿದರ ಬಿಜಾಪುರ ನೆನಪಾಗತೈತಿ, ನಾ ಸಣ್ಣವ ಇದ್ದಾಗ ಕಳೆದ ಹಳ್ಳಿ ಊರ ಜೀವನ ನೆನಪಾಗತೈತಿ. ನಿಂಬೆವ್ವ, ಸಂಗವ್ವ, ಈರವ್ವ ಮುಂತಾದ ಸಾಲಿ ಗೆಳತ್ಯಾರು ಕಣ್ಣ ಮುಂದ ಬಂದ ನಿಂತಂಗ ಆಗತೈತಿ…..
    ಹೆಂಡತಿ ಅಡಿಗಿಮನ್ಯಾಗಿಂದ ಕೂಗಿ ” ತಾಟ ಬಡಿಸೀನಿ ಊಟಕ್ಕ ಬರ್ರಿ” ಅಂತ ಕರದಾಗ ಕ್ಷಣದಾಗ ಎಲ್ಲಾ ಮರತು ಹೋಗತೈತಿ.

Leave a Reply

Back To Top