ಕಾವ್ಯ ಸಂಗಾತಿ
ಸವಿತಾ ದೇಶಮುಖ
ಕೆನೆಗಟ್ಟಿದ ಭಾವ
ಕೆನೆಗಟ್ಟಿದ ಭಾವವು
ಹೊರ ಹೊಮ್ಮಲಿ
ಹೊನಲಾಗಿ ಹಸಿರಾಗಿ
ಉಸಿರಾಗಿ- ಕವನವಾಗಿ,
ಮುಟ್ಟಿ ಎಲ್ಲರ ಮನೆಗಳಲಿ
ಶಬ್ದಾಂಕನಗೊಳ್ಳಲಿ,
ಕವಿ -ಸಹೃದಯದಿ…..
*ಕೆನೆಗಟ್ಟಿದ ಪ್ರೇಮ ಭಾವವು
ಹೆಪ್ಪಾಗಿ- ಅನುರಾಗದಲಿ,
ಅಂತರಂಗದ ಜೀವನಾಡಿಯಲಿ
ಪ್ರೀತಿಯೊಂದು- ರೂಪಗಿ,
ಚಿಮ್ಮಲಿ- ಹುಲಸಾಗಿ ಬೆಳೆಯಲಿ
ಪ್ರೇಮಿಗಳ ಉದರದಿ….
*ಕೆನೆಗಟ್ಟಿ ನಿಂದ
ದೇಶಾಭಿಮಾನದ ಭಾವವು
ಕಡೆದ ತುಪ್ಪಾಗಿ- ತೆಪ್ಪಗಿ ಕೂಡದಿರದು,
ಮಾತೃಭೂಮಿ ಅಭಿಮಾನವ ಮರೆಯದೆ,
ಧೈರ್ಯವನು ತೊರೆಯದೆ,
ಸೊಂಟ ಕಟ್ಟಿ ನಿಂತು ಹೋರಾಡುವ
ದೇಶಪ್ರೇಮಿಗಳ- ಮೆರುಗು…..
*ಕೆನೆಗಟ್ಟಿನಿಂದ ಹೆಣ್ಣಿನ ಭಾವಕ್ಕೆ
ಎರಕು ಹೊಯ್ದು ನೋಡು
ಅಬಲೆ ಬಾಳಿನಲ್ಲಿ ಬೆರೆತ
ಹಾಲಿನಂತೆ,ಕೆಂಗಟ್ಟಿ ನಿಂತ
ಅವಳಂತರಂಗದ…
ಆಳಕೊಮ್ಮೆಇಳಿದುನೋಡು,
ಕುಂದುಒಡೆಯದಥಂಹ ಹೊಳೆವ- ಕಾಂತಿ ,
ಕಾಣದೆ ದೀನಳ ಎದೆಯ ಒಲವು ….
——————————-
ಸವಿತಾ ದೇಶಮುಖ