ಕಾವ್ಯ ಸಂಗಾತಿ
ಗಂಗಾಧರ ಬಿ ಎಲ್ ನಿಟ್ಟೂರ್
‘ಬಾ ಬಯಲ ಆಲಯಕೆ’
ಬಂದು ಬಿಡು ಓಡೋಡಿ
ತೀರ ತೊರೆದು ಗೆಳತಿ
ಉಪ್ಪು ನೀರ ಕಡಲೆಂದು
ಗೊತ್ತಿದ್ದೂ ದಡದ ಮುಂದೆ
ಕುಳಿತು ದಿನವಿಡಿ ಯಾಕಳುವೆ
ಮೈ ಒದ್ದೆಯ ಹಿತವಿಲ್ಲ
ಬಟ್ಟೆ ತೊಯ್ದರೂ ತಂಪಿಲ್ಲ
ಪಾನ ಪ್ರೋಕ್ಷಣೆಯಂತೂ ದೂರ
ಬಚ್ಚಿಟ್ಟ ನೆನಹುಗಳ
ಹಂಚಿಕೊಳಲು ಯಾರಿಲ್ಲ
ಕಣ್ಣೇರ ಒರೆಸುವ ಕೈಗಳಿಲ್ಲ
ಕೊಚ್ಚಿ ಹೋದಾವು ಕನಸು ಕೂಡ
ಅಲೆಯ ಅಬ್ಬರಕೆ
ಸಾಕು ಬಾ ಬಯಲ ಆಲಯಕೆ
ನೋವ ನುಂಗಿದ್ದು ಸಾಕು
ನಕ್ಕು ಹಗುರಾಗಿ
ಗಟ್ಟಿಗಿತ್ತ್ಯಾಗಿ ಬಾಳು ಬಾ ಗೆಳತಿ
ಗಂಗಾಧರ ಬಿ ಎಲ್ ನಿಟ್ಟೂರ್
ಕವಿತೆ ಅರ್ಥಪೂರ್ಣವಾಗಿದೆ.
ನೊಂದ ಮನದ ಬೇಗುದಿಯ ಸಂತೈಸುವಂತೆ ಮೂಡಿದೆ
ಅರ್ಥಪೂರ್ಣವಾದ ಸಾಲುಗಳು ಚೆನ್ನಾಗಿದೆ ಕವಿತೆ